alex Certify ಖ್ಯಾತ ನಿರ್ಮಾಪಕ ಜಾಕ್ ಮಂಜು ವಿರುದ್ಧ ಎಫ್ಐಆರ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಿರ್ಮಾಪಕ ಜಾಕ್ ಮಂಜು ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ನಿರ್ಮಾಪಕ ಜಾಕ್ ಮಂಜು ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ಮಾಯಾನಗರಿ’ ಸಿನಿಮಾ ನಿರ್ಮಾಪಕ ಶಿವಶಂಕರ್(ಶಶಾಂಕ್) ಅವರು ನಿರ್ಮಾಪಕ ಜಾಕ್ ಮಂಜು ಮತ್ತು ಸ್ಯಾಂಡಲ್ವುಡ್ ಪಿಕ್ಚರ್ ನ ಶಿವಕುಮಾರ್ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ.

ನಟ ಅನೀಶ್ ನಟಿಸಿದ ‘ಮಾಯಾನಗರಿ’ ಚಿತ್ರಕ್ಕೆ ಸಿದ್ದೇಶ್ ಎಂಬುವರನ್ನು ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ನೇಮಕ ಮಾಡಲಾಗಿತ್ತು. ಸಿದ್ದೇಶ್ ಕೂಡ ಈ ಚಿತ್ರಕ್ಕೆ 8 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದಾರೆ. ನಂತರ ಚಿತ್ರೀಕರಣಕ್ಕೆ ಹಣ ಒದಗಿಸಿ ಕೊಡಲು ದೂರುದಾರ ಶಿವಶಂಕರ್ ಅವರು ಸಿದ್ದೇಶ್ ಗೆ ಕೇಳಿಕೊಂಡಿದ್ದಾರೆ.

ಸಿದ್ದೇಶ್ ಅವರು ಮುರಳಿ ಎಂಬುವರ ಮೂಲಕ ನಿರ್ಮಾಪಕ ಜಾಕ್ ಮಂಜು ಅವರನ್ನು ಪರಿಚಯ ಮಾಡಿಸಿದ್ದಾರೆ ಇವರ ನಡುವೆ ಅಗ್ರಿಮೆಂಟ್ ಆಗಿದ ಎರಡು ಖಾಲಿ ಚೆಕ್ ಗಳಿಗೆ, ಖಾಲಿ ಬಾಂಡ್ ಪೇಪರ್ ಗೆ ಸಹಿ ಮಾಡಿಸಿಕೊಂಡು ಮೂರು ನಾಲ್ಕು ದಿನಗಳ ನಂತರ ಹಣ ಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಹಣ ನೀಡದೆ ಚಿತ್ರ ಮಾರಾಟ ಅಗ್ರಿಮೆಂಟ್ ಗೆ ಸಹಿ ಹಾಕಲು ಒತ್ತಾಯಿಸಿದ್ದಾರೆ. ಸಹಿ ಹಾಕದಿದ್ದರೆ ಸಿನಿಮಾ ಬಿಡುಗಡೆಗೆ ತೊಂದರೆ ಉಂಟು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ತಮ್ಮ ದಾಖಲಾತಿಗಳನ್ನು ದುರ್ಬಳಕೆ ಮಾಡಿ ವಂಚಿಸಿದ್ದಾರೆ ಎಂದು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...