HomeEntertainment'ರಾಯಲ್' ಚಿತ್ರದ ಮೊದಲ ಹಾಡು ರಿಲೀಸ್

‘ರಾಯಲ್’ ಚಿತ್ರದ ಮೊದಲ ಹಾಡು ರಿಲೀಸ್

ದಿನಕರ್ s. ನಿರ್ದೇಶನದ ವಿರಾಟ್ ಅಭಿನಯದ ಬಹು ನಿರೀಕ್ಷಿತ ‘ರಾಯಲ್’ ಚಿತ್ರದ ಮೊದಲ  ಹಾಡನ್ನು ಇಂದು ಸರಿಗಮ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ. “ನಾನೇ ಕೃಷ್ಣ ನಾನೇ ಶಾಮ್” ಎಂಬ ಈ ಹಾಡಿಗೆ ಸಂಜೀತ್ ಹೆಗಡೆ ಹಾಗೂ ಎಂ ಎಂ ಮಾನಸಿ ಧ್ವನಿಯಾಗಿದ್ದು, ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನುಳಿದಂತೆ ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಜಯಣ್ಣ ಫಿಲಂಸ್ ಬ್ಯಾನರ್ ನಡಿ ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡಿದ್ದು, ವಿರಾಟ್ ಗೆ ಜೋಡಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಇನ್ನುಳಿದಂತೆ ರಘು ಮುಖರ್ಜಿ, ಛಾಯಾಸಿಂಗ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ರವಿ ಭಟ್ ಮತ್ತು ಗೋಪಾಲ್ ದೇಶಪಾಂಡೆ ಉಳಿದ  ತಾರಾಂಗಣದಲ್ಲಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ಸಂಕೇತ್ ಎಂ. ವೈ. ಎಸ್  ಛಾಯಾಗ್ರಹಣ ಹಾಗೂ ಡಾಕ್ಟರ್ ಕೆ ರವಿವರ್ಮ ಅವರ  ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular