HomeIndiaಎಲ್ಲಾ ಖಾಸಗಿ ವಾಹಿನಿಗಳಲ್ಲಿ ದುರಂತ, ಅಪಘಾತ ವಿಡಿಯೋ ಪ್ರಸಾರ ವೇಳೆ ದಿನಾಂಕ, ಸಮಯ ನಮೂದು ಕಡ್ಡಾಯ

ಎಲ್ಲಾ ಖಾಸಗಿ ವಾಹಿನಿಗಳಲ್ಲಿ ದುರಂತ, ಅಪಘಾತ ವಿಡಿಯೋ ಪ್ರಸಾರ ವೇಳೆ ದಿನಾಂಕ, ಸಮಯ ನಮೂದು ಕಡ್ಡಾಯ

ನವದೆಹಲಿ: ಎಲ್ಲಾ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪ್ರಮುಖ ದುರಂತಗಳು ಮತ್ತು ಗಂಭೀರ ಅಪಘಾತಗಳ ವಿಡಿಯೋಗಳನ್ನು ಪ್ರಸಾರ ಮಾಡುವಾಗ ದೃಶ್ಯಗಳ ಮೇಲೆ ಅಪಘಾತ ಮತ್ತು ವಿಪತ್ತು, ದುರಂತ ಸಂಭವಿಸಿದ ಸಮಯ, ದಿನಾಂಕ ನಮೂದಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ವತಿಯಿಂದ ಸೋಮವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಪ್ರಮುಖ ದುರಂತಗಳು ಮತ್ತು ಗಂಭೀರ ಅಪಘಾತಗಳ ವಿಡಿಯೋ ಪ್ರಸಾರ ಮಾಡುವಾಗ ದೃಶ್ಯಗಳ ಮೇಲೆ ಅವು ಸಂಭವಿಸಿದ ದಿನಾಂಕ ಮತ್ತು ಸಮಯ ನಮೂದಿಸುವುದನ್ನು ಎಲ್ಲಾ ಸುದ್ದಿ ವಾಹಿನಿಗಳಿಗೆ ಕಡ್ಡಾಯಗೊಳಿಸಲಾಗಿದೆ.

ನೈಸರ್ಗಿಕ ವಿಕೋಪಗಳು, ಪ್ರಮುಖ ಅಪಘಾತಗಳ ಪ್ರಸಾರವನ್ನು ಹಲವಾರು ದಿನಗಳವರೆಗೆ ವಾಹಿನಿಗಳು ತೋರಿಸುತ್ತವೆ. ಆದರೆ, ಘಟನೆ ನಡೆದ ದಿನದ ದೃಶ್ಯಗಳನ್ನು ತೋರಿಸುತ್ತಲೇ ಇರುತ್ತವೆ. ಅಪಘಾತ ಅಥವಾ ದುರಂತದ ನಂತರ ಹಲವಾರು ದಿನಗಳ ನಂತರ ತೋರಿಸಿರುವ ದೃಶ್ಯಾವಳಿಗಳು ನೈಜ ಸಮಯದ ನೆಲದ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಇದು ವೀಕ್ಷಕರಲ್ಲಿ ಅನಗತ್ಯ ಗೊಂದಲ ಮತ್ತು ಸಂಭಾವ್ಯ ಭೀತಿಗೆ ಕಾರಣವಾಗುತ್ತದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೀಕ್ಷಕರಲ್ಲಿ ಯಾವುದೇ ತಪ್ಪು ತಿಳಿವಳಿಕೆ ತಪ್ಪಿಸಲು, ಎಲ್ಲಾ ಖಾಸಗಿ ಉಪಗ್ರಹ ಟಿವಿ ಚಾನೆಲ್‌ಗಳು ವಿಪತ್ತುಗಳು, ನೈಸರ್ಗಿಕ ವಿಕೋಪಗಳು ಅಥವಾ ದೊಡ್ಡ ಅಪಘಾತಗಳ ದೃಶ್ಯಗಳು ತುಣುಕಿನ ಮೇಲ್ಭಾಗದಲ್ಲಿ ‘ದಿನಾಂಕ ಮತ್ತು ಸಮಯ’ ಸ್ಟ್ಯಾಂಪ್ ಅನ್ನು ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ತಿಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular