HomeKarnatakaವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪ್ರಸಕ್ತ ವರ್ಷದಿಂದಲೇ ನಾಲ್ಕು ಹೊಸ ಕೋರ್ಸ್ ಆರಂಭ: ಸ್ಟೈಫಂಡ್ ಸಹಿತ ಇಂಟರ್ನ್...

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪ್ರಸಕ್ತ ವರ್ಷದಿಂದಲೇ ನಾಲ್ಕು ಹೊಸ ಕೋರ್ಸ್ ಆರಂಭ: ಸ್ಟೈಫಂಡ್ ಸಹಿತ ಇಂಟರ್ನ್ ಶಿಪ್

ಕಲಬುರಗಿ: ರಾಜ್ಯದ 45 ಕಾಲೇಜುಗಳಲ್ಲಿ ನಾಲ್ಕು ಹೊಸ ಕೋರ್ಸ್ ಗಳನ್ನು ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರಲ್ಲಿ ಸೈದ್ಧಾಂತಿಕ, ಪ್ರಾಯೋಗಿಕ ಜ್ಞಾನ ಕೌಶಲ್ಯ ವೃದ್ಧಿಗೆ ರಾಜ್ಯದ 45 ಕಾಲೇಜುಗಳಲ್ಲಿ ನಾಲ್ಕು ಹೊಸ ಕೋರ್ಸ್ ಗಳನ್ನು ಪ್ರಸಕ್ತ ವರ್ಷದಿಂದ ಆರಂಭಿಸಲಾಗುವುದು. 1,500 ವಿದ್ಯಾರ್ಥಿಗಳಿಗೆ ಪ್ರವೇಶ ಸಿಗಲಿದೆ ಎಂದು ಹೇಳಿದ್ದಾರೆ.

ಕೇಂದ್ರದ ಸ್ಕಿಲ್  ಸೆಕ್ಟರ್ ಕೌನ್ಸಿಲ್ ಅಡಿ ಈ ಕೋರ್ಸ್ ಗಳನ್ನು ಆರಂಭಿಸಲಾಗುವುದು. ಬಿ.ಕಾಂ ಇನ್ ಲಾಜಿಸ್ಟಿಕ್, ಬಿ.ಕಾಂ ಇನ್ ಇ-ಕಾಮರ್ಸ್, ಬಿ.ಕಾಂ ಇನ್ ರಿಟೇಲ್, ಬ್ಯಾಂಕಿಂಗ್ ಅಂಡ್ ಫೈನಾನ್ಸ್ ಕೋರ್ಸ್ ಗಳು ಆರಂಭವಾಗಲಿದೆ. ಎರಡು ವರ್ಷ ಥಿಯರಿ ಮತ್ತು ಮೂರನೇ ವರ್ಷ ಸ್ಟೈಫಂಡ್ ಸಹಿತ ಇಂಟರ್ನ್ ಶಿಪ್ ಇರಲಿದೆ. ಇದಕ್ಕಾಗಿ ಸ್ಕಿಲ್ ಸೆಕ್ಟರ್ ಕೌನ್ಸಿಲ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular