HomeKarnatakaBREAKING NEWS: ಕಾಫಿ ಶಾಪ್ ವಾಶ್ ರೂಮ್ ನಲ್ಲಿ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್; ಶಿವಮೊಗ್ಗ...

BREAKING NEWS: ಕಾಫಿ ಶಾಪ್ ವಾಶ್ ರೂಮ್ ನಲ್ಲಿ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್; ಶಿವಮೊಗ್ಗ ಮೂಲದ ಆರೋಪಿ ಅರೆಸ್ಟ್

ಬೆಂಗಳೂರು: ಕಾಫಿ ಶಾಪ್ ನ ವಾಶ್ ರೂಮ್ ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ ಮನೋಜ್ ಬಂಧಿತ ಆರೋಪಿ. ಬೆಂಗಳೂರಿನ ಬಿಇಎಲ್ ರಸ್ತೆಯ ಥರ್ಡ್ ವೇವ್ ಕೆಫೆಯಲ್ಲಿ ಈ ಘಟನೆ ನಡೆದಿದೆ. ಕೆಫೆಯಲ್ಲಿ ಕಾಫಿ ಮೇಕರ್ ಆಗಿದ್ದ ಮನೋಜ್ ತನ್ನ ಮೊಬೈಲ್ ನ್ನು ಫ್ಲೈಟ್ ಮೋಡ್ ನಲ್ಲಿ ರೆಕಾರ್ಡಿಂಗ್ ಆನ್ ಮಾಡಿ, ವಾಶ್ ರೂಮ್ ನಲ್ಲಿ ಇಟ್ಟಿದ್ದ.

ಮಹಿಳೆಯೊಬ್ಬರು ವಾಶ್ ರೂಮ್ ಗೆ ಹೋದಾಗ ಮೊಬೈಲ್ ಇರುವುದು ಪತ್ತೆಯಾಗಿದೆ. ತಕ್ಷಣ ಸದಾಶಿವನಗರ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶಿವಮೊಗ್ಗ ಮೂಲದ ಆರೋಪಿ ಮನೋಜ್ ನನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಮಹಿಳೆಯ ಕ್ಷಮೆ ಕೇಳಿದ ಕಾಫಿ ಶಾಪ್ ಮಾಲೀಕರು, ಇತರ ಸಿಬ್ಬಂದಿಗಳು, ಮನೋಜ್ ನನ್ನು ಕೆಲಸದಿಂದ ವಜಾ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular