HomeCrimeಕೆಲಸ ಕೊಡಿಸುವ ನೆಪದಲ್ಲಿ ಕರೆಮಾಡಿ ಯುವತಿಗೆ ಆಹ್ವಾನ; ಕೋರ್ಟ್ ಚೇಂಬರ್ ನಲ್ಲಿ ಲಾಯರ್ ನಿಂದ ಅತ್ಯಾಚಾರ...

ಕೆಲಸ ಕೊಡಿಸುವ ನೆಪದಲ್ಲಿ ಕರೆಮಾಡಿ ಯುವತಿಗೆ ಆಹ್ವಾನ; ಕೋರ್ಟ್ ಚೇಂಬರ್ ನಲ್ಲಿ ಲಾಯರ್ ನಿಂದ ಅತ್ಯಾಚಾರ ?

ಉತ್ತರ ದೆಹಲಿಯ ತೀಸ್ ಹಜಾರಿ ಕೋರ್ಟ್‌ನಲ್ಲಿರುವ ತನ್ನ ಚೇಂಬರ್‌ನಲ್ಲಿ ವಕೀಲರೊಬ್ಬರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ 21 ವರ್ಷದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿತ ವಕೀಲ ಕೆಲಸ ಕೊಡಿಸುವ ನೆಪದಲ್ಲಿ ಜುಲೈ 27ರಂದು ತನಗೆ ಕರೆ ಮಾಡಿದ್ದಾಗಿ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಭೇಟಿಯ ಸಮಯದಲ್ಲಿ ಆತ ನನ್ನನ್ನು ಅತ್ಯಾಚಾರಕ್ಕೆ ಬಲವಂತಪಡಿಸಿದನು ಎಂದು ಯುವತಿ ಹೇಳಿದ್ದಾಳೆ. ಹಲ್ಲೆಯ ಬಗ್ಗೆ ಯಾರಿಗಾದರೂ ಹೇಳಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಕೀಲರು ಬೆದರಿಕೆ ಹಾಕಿದ್ದನಂತೆ.

ಘಟನೆಯ ನಂತರ ಆಕೆಗೆ ರೂ 1,500 ನೀಡಿ ಹೊರಡುವಂತೆ ಸೂಚಿಸಿದ್ದಾನೆ. ಮನೆಗೆ ಹಿಂದಿರುಗಿದ ಯುವತಿ ಘಟನೆಯ ಬಗ್ಗೆ ತನ್ನ ಚಿಕ್ಕಮ್ಮನಿಗೆ ತಿಳಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ನಂತರ ಆಕೆಯ ಚಿಕ್ಕಮ್ಮ ಘಟನೆಯನ್ನು ವರದಿ ಮಾಡಲು ಪೊಲೀಸರನ್ನು ಸಂಪರ್ಕಿಸಿದರು. ಸಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular