HomeEntertainment'Out of ಸಿಲಬಸ್' ಚಿತ್ರದ ಮೊದಲ ಲಿರಿಕಲ್ ಸಾಂಗ್ ರಿಲೀಸ್

‘Out of ಸಿಲಬಸ್’ ಚಿತ್ರದ ಮೊದಲ ಲಿರಿಕಲ್ ಸಾಂಗ್ ರಿಲೀಸ್

ಪ್ರದೀಪ್ ದೊಡ್ಡಯ್ಯ ನಟಿಸಿ ನಿರ್ದೇಶಿಸಿರುವ ‘ಔಟ್ ಆಫ್ ಸಿಲಬಸ್’ ಚಿತ್ರದ ಮೊದಲ ಲಿರಿಕಲ್ ಸಾಂಗ್ ಅನ್ನು ಇಂದು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಪ್ರೀತಿ ಆಗಿದೆ’ ಎಂಬ ಈ ಹಾಡಿಗೆ ಪ್ರಣವ ಕಾರಂತ್ ಧ್ವನಿಯಾಗಿದ್ದು, ಡಿ ಶ್ರೀನಿವಾಸ ಆಚಾರ್ ಮತ್ತು ಆರ್ ಪಿ ಪಟ್ನಾಯಕ್ ಸಂಗೀತ ಸಂಯೋಜನೆ ನೀಡಿದ್ದಾರೆ ಇನ್ನುಳಿದಂತೆ ಪ್ರದೀಪ್ ದೊಡ್ಡಯ್ಯ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರದಲ್ಲಿ ಪ್ರದೀಪ್ ದೊಡ್ಡಯ್ಯ ಮತ್ತು ಹರ್ಷಿಕ ಶ್ರೀನಿವಾಸ್ ಪ್ರಮುಖ ಪಾತ್ರದಲ್ಲಿದ್ದು, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ, ಚಿತ್ಕಲಾ ಬಿರಾದಾರ್, ಮಂಜು ಪಾವಗಡ, ಮಹಾಂತೇಶ್ ಹಿರೇಮಠ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ತನುಷ್ ಎಸ್ ವಿ, ದೇಸಾಯಿಗೌಡ, ಹಾಗೂ ಶ್ರೀಮತಿ ಕೆ ವಿಜಯಕಲಾ ಸುಧಾಕರ್  ನಿರ್ಮಾಣ ಮಾಡಿದ್ದು, ಉಮೇಶ್ ಆರ್ ಬಿ ಸಂಕಲನ ಹಾಗೂ ದೇವ್ ವಡ್ಡೆ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular