HomeEntertainment'ಬ್ಯಾಕ್ ಬೆಂಚರ್ಸ್' ಚಿತ್ರದ ''ಕಾಲೇಜ್ ಡೇಸ್'' ಹಾಡು ರಿಲೀಸ್

‘ಬ್ಯಾಕ್ ಬೆಂಚರ್ಸ್’ ಚಿತ್ರದ ”ಕಾಲೇಜ್ ಡೇಸ್” ಹಾಡು ರಿಲೀಸ್

ಜುಲೈ 19ರಂದು ರಾಜ್ಯಾದ್ಯಂತ ತೆರೆಕಂಡಿದ್ದ ರಾಜಶೇಖರ್ ನಿರ್ದೇಶನದ ‘ಬ್ಯಾಕ್ ಬೆಂಚರ್ಸ್’ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದ್ದು,  ತನ್ನ ನಾಗಾ ಲೋಟವನ್ನು ಮುಂದುವರೆಸಿದೆ. ಕಾಲೇಜ್ ವಿದ್ಯಾರ್ಥಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ‘ಬ್ಯಾಕ್ ಬೆಂಚರ್ಸ್’  ಚಿತ್ರತಂಡ ಇದೀಗ  ವಿಡಿಯೋ ಹಾಡೊಂದನ್ನ ಬಿಡುಗಡೆ ಮಾಡಿದೆ. ನಕುಲ್ ಅಭ್ಯಂಕರ್ ಹಾಗೂ ಹಾಗೂ ಐಶ್ವರ್ಯ ರಂಗರಾಜನ್ ಈ  ಹಾಡಿಗೆ ಧ್ವನಿಯಾಗಿದ್ದು, ಪವನ್ ಭಟ್ ಸಾಹಿತ್ಯವಿದೆ.

ಈ ಚಿತ್ರವನ್ನು ಪಿಪಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಮ್ಯಾ ನಿರ್ಮಾಣ ಮಾಡಿದ್ದು, ರಂಜನ್ ನರಸಿಂಹಮೂರ್ತಿ ಸೇರಿದಂತೆ ಜತಿನ್ ಆರ್ಯನ್, ಆಕಾಶ್ ಎಂಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಲಿಕರ್, ಮಾನ್ಯ ಗೌಡ , ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ, ವನಿತಾ, ಮನೋಜ್ ಶೆಟ್ಟಿ , ನಮಿತ್ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಬಣ್ಣ ಹಚ್ಚಿದ್ದಾರೆ. ರಂಜನ್ ನರಸಿಂಹಮೂರ್ತಿ ಹಾಗೂ ಅಮರಗೌಡ ಅವರ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular