HomeIndiaVIDEO: 'ವೆಜ್' ಆರ್ಡರ್ ಮಾಡಿದವರಿಗೆ 'ನಾನ್ ವೆಜ್' ಆಹಾರ; ವೇಯ್ಟರ್ ಕಪಾಳಕ್ಕೆ ಬಾರಿಸಿದ 'ವಂದೇ ಭಾರತ್'...

VIDEO: ‘ವೆಜ್’ ಆರ್ಡರ್ ಮಾಡಿದವರಿಗೆ ‘ನಾನ್ ವೆಜ್’ ಆಹಾರ; ವೇಯ್ಟರ್ ಕಪಾಳಕ್ಕೆ ಬಾರಿಸಿದ ‘ವಂದೇ ಭಾರತ್’ ಪ್ರಯಾಣಿಕ….!

‘ವಂದೇ ಭಾರತ್’ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ನಾಗರಿಕರೊಬ್ಬರು ಸಸ್ಯಹಾರಿ ಆಹಾರವನ್ನು ಆರ್ಡರ್ ಮಾಡಿದ್ದು, ಆದರೆ ಗೊಂದಲಕ್ಕೊಳಗಾದ ವೇಯ್ಟರ್ ಮಾಂಸಾಹಾರಿ ಆಹಾರವನ್ನು ತಂದುಕೊಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಹಿರಿಯ ನಾಗರಿಕ ವೇಯ್ಟರ್ ಗೆ ಹೊಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.

ಹೌರಾ – ರಾಂಚಿ ನಡುವೆ ಸಂಚರಿಸುವ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿನಲ್ಲಿ ಜುಲೈ 26ರಂದು ಈ ಘಟನೆ ನಡೆದಿದ್ದು, ರೈಲಿನಲ್ಲಿ ಆಹಾರ ಸರಬರಾಜು ಮಾಡುವ ವ್ಯಕ್ತಿ ಹಿರಿಯ ನಾಗರಿಕರಿಗೆ ಅವರು ಆರ್ಡರ್ ಮಾಡಿದ್ದ ಸಸ್ಯಾಹಾರದ ಬದಲಿಗೆ ಮಾಂಸಾಹಾರ ತಂದು ಕೊಟ್ಟಿದ್ದಾನೆ. ಇದನ್ನು ಅರಿಯದೆ ಅವರು ಸಹ ಆಹಾರವನ್ನು ಬಾಯಿಗೆ ಇಟ್ಟುಕೊಂಡಿದ್ದಾರೆ.

ಆ ಬಳಿಕ ಅವರಿಗೆ ತಮಗೆ ತಂದು ಕೊಟ್ಟಿದ್ದು ಮಾಂಸಹಾರ ಎಂಬ ಸಂಗತಿ ಗೊತ್ತಾಗಿದ್ದು ಇದರಿಂದ ಆಕ್ರೋಶಗೊಂಡ ಅವರು ವೇಯ್ಟರ್ ಗೆ ಹೊಡೆದಿದ್ದಾರೆ. ಇದರಿಂದ ಕಣ್ಣೀರಿಟ್ಟ ಆತ ಕ್ಷಮೆ ಕೋರಿದ್ದು, ಆದರೆ ಘಟನೆಯಿಂದ ಕೋಪಗೊಂಡ ಇತರ ಪ್ರಯಾಣಿಕರು ವೇಯ್ಟರ್ ಕ್ಷಮೆ ಯಾಚಿಸುವಂತೆ ಹಿರಿಯ ನಾಗರಿಕರಿಗೆ ಆಗ್ರಹಿಸಿದ್ದಾರೆ. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular