alex Certify ಕೆ.ಆರ್.ಎಸ್ ಗೆ ಬಾಗಿನ ಅರ್ಪಣೆ ಬಳಿಕ ಬಾಡೂಟ ಆಯೋಜನೆ; ಕಾವೇರಿ ನಿಗಮದ ಅಧಿಕಾರಿಗಳ ಎಡವಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆ.ಆರ್.ಎಸ್ ಗೆ ಬಾಗಿನ ಅರ್ಪಣೆ ಬಳಿಕ ಬಾಡೂಟ ಆಯೋಜನೆ; ಕಾವೇರಿ ನಿಗಮದ ಅಧಿಕಾರಿಗಳ ಎಡವಟ್ಟು

ಮೈಸೂರು: ಕೆ.ಆರ್.ಎಸ್ ಗೆ ಬಾಗಿನ ಸಮರ್ಪಣೆ ಬಳಿಕ ಸಂಪ್ರದಾಯ ಮುರಿದು ಕಾವೇರಿ ನಿಗಮದ ಅಧಿಕಾರಿಗಳು ಬಾಡೂಟ ಆಯೋಜನೆ ಮಾಡಿರುವ ಆರೋಪ ಕೇಳಿಬಂದಿದೆ.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಡವಟ್ಟು ಮಾಡಿದ್ದು, ಇದೇ ಮೊದಲ ಬಾರಿಗೆ ಸಂಪ್ರದಾಯವನ್ನು ಮುರಿದು, ಬಾಗಿನ ಅರ್ಪಣೆ ಬಳಿಕ ಭರ್ಜರಿ ಬಾಡೂಟ ಆಯೋಜಿಸಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೆ.ಆರ್.ಎಸ್ ನ ಖಾಸಗಿ ಹೋಟೆಲ್ ನಲ್ಲಿ ಅಧಿಕಾರಿಗಳು ಬಾಡೂಟ ಆಯೋಜಿಸಿದ್ದು, ಸಿಎಂ ಸಿದ್ದರಾಮಯ್ಯ, ಸಚಿವರು ಹೊರಟ ಬಳಿಕ ಇತ್ತ ಅಧಿಕಾರಿಗಳು ಬಾಡೂಟದಲ್ಲಿ ಪಾಲ್ಗೊಂಡಿದ್ದಾರೆ.

ಕಾವೇರಿ ನದಿಗೆ ಬಾಗಿನ ಅರ್ಪಿಸಿದ ದಿನ ಈವರೆಗೆ ಎಂದೂ ಬಾಡೂಟ ಆಯೋಜನೆ ಮಾಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಕಾವೇರಿ ನಿಗಮದ ಅಧಿಕಾರಿಗಳು ಬಾಡೂಟ ಆಯೋಜಿಸಿ ಸಂಪ್ರದಾಯವನ್ನು ಮುರಿದಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...