ನಾಳೆ ಬಿಡುಗಡೆಯಾಗಲಿದೆ ‘ರಾಜಾ ಸಾಬ್’ ಚಿತ್ರದ ಗ್ಲಿಂಪ್ಸ್‌ ವಿಡಿಯೋ

‘ಕಲ್ಕಿ 2898’ ಚಿತ್ರದ ಯಶಸ್ಸಿನ ಬಳಿಕ ಇದೀಗ ನಟ ಪ್ರಭಾಸ್  ಮತ್ತೊಂದು ಫ್ಯಾನ್ ಇಂಡಿಯಾ ಚಿತ್ರವಾದ ‘ರಾಜಾ ಸಾಬ್’  ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಇದರ ಗ್ಲಿಂಪ್ಸ್‌ ವಿಡಿಯೋ ಒಂದು ನಾಳೆ ಯೂಟ್ಯೂಬ್ ನಲ್ಲಿ  ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಮಾರುತಿ ನಿರ್ದೇಶನದ ಈ ಚಿತ್ರವನ್ನು ಪೀಪಲ್ ಮೇಡಿಯಾ ಫ್ಯಾಕ್ಟರಿ ಬ್ಯಾನರ್ ನಡಿ ಟಿಜಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಿದ್ದು, ವಿವೇಕ್ ಕೂಚಿಬೋಟ್ಲ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಪ್ರಭಾಸ್ ಸೇರಿದಂತೆ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್, ಯೋಗಿ ಬಾಬು, ತಾರಾಂಗಣದಲ್ಲಿದ್ದಾರೆ. ಕೋಟಗಿರಿ ವೆಂಕಟೇಶ್ವರ ಪ್ರಸಾದ್ ಅವರ ಸಂಕಲನ, ಕಾರ್ತಿಕ್ ಫಲಾನಿ ಛಾಯಾಗ್ರಹಣ, ಹಾಗೂ ಕಿಂಗ್ ಸೊಲೋಮೋನ್ ಅವರ ಸಾಹಸ ನಿರ್ದೇಶನವಿದೆ. 

https://twitter.com/vikramsnatak/status/1817461931965403364

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read