ತಮಿಳಿನ ಖ್ಯಾತ ನಟ ಧನುಷ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ‘ರಾಯನ್’ ಚಿತ್ರ ಇಂದು ತೆರೆ ಕಂಡಿದ್ದು, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ದೊಡ್ಡ ಕಟೌಟ್ಗಳನ್ನು ನಿರ್ಮಿಸಿರುವ ಧನುಷ್ ಅಭಿಮಾನಿಗಳು ಹಾರ ಹಾಕಿ ಸಂಭ್ರಮಿಸಿದ್ದಾರೆ.
ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಧನುಶ್ ಸೇರಿದಂತೆ ಎಸ್ ಜೆ ಸೂರ್ಯ, ಪ್ರಕಾಶ್ ರಾಜ್, ಸೆಲ್ವರಾಘವನ್, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ದುಶಾರ ವಿಜಯನ್, ಇಮ್ಮಾನ್ ಅಣ್ಣಾಚಿ, ಅಪರ್ಣಾ ಬಾಲಮುರಳಿ, ವರಲಕ್ಷ್ಮಿ ಶರತ್‌ಕುಮಾರ್, ಸರವಣನ್, ಅರಂತಂಗಿ ನಿಶಾ, ಅನಿಖಾ ಸುರೇಂದ್ರನ್, ರಾಮಚಂದ್ರನ್ ದುರೈರಾಜ್, ಬಣ್ಣ ಹಚ್ಚಿದ್ದಾರೆ.
ಸನ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ಕಲಾನಿತಿ ಮಾರನ್ ನಿರ್ಮಾಣ ಮಾಡಿದ್ದು ಪ್ರಸನ್ನ ಜಿಕೆ ಅವರ ಸಂಕಲನವಿದೆ. ಇನ್ನುಳಿದಂತೆ ಎಆರ್ ರೆಹಮಾನ್ ಸಂಗೀತ ಸಂಯೋಜನೆ ನೀಡಿದ್ದಾರೆ.
#Raayan and his family in theatres on July 26th ❤🔥
Bookings open now:https://t.co/eXS0rHbysb#RaayanFromJuly26
A @dhanushkraja directorial@arrahman @iam_SJSuryah @selvaraghavan @kalidas700 @sundeepkishan @prakashraaj @officialdushara @Aparnabala2 @varusarath5 #Saravanan… pic.twitter.com/O8SmcT5Kn8
— Telugu FilmNagar (@telugufilmnagar) July 25, 2024
#TFNReels: Massive celebrations by @dhanushkraja's fans at theatres for the #Raayan release! 💥 #Dhanush #SundeepKishan #SJSuryah #TeluguFilmNagar pic.twitter.com/y0WCh5omdn
— Telugu FilmNagar (@telugufilmnagar) July 26, 2024