HomeEntertainment28ನೇ ವಸಂತಕ್ಕೆ ನಟಿ ಅಮೃತ ಅಯ್ಯಂಗಾರ್

28ನೇ ವಸಂತಕ್ಕೆ ನಟಿ ಅಮೃತ ಅಯ್ಯಂಗಾರ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ನ ಬೇಡಿಕೆಯ ನಟಿ ಅಮೃತ ಅಯ್ಯಂಗಾರ್ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

2017 ರಲ್ಲಿ ತೆರೆಕಂಡ ವಿಕ್ರಂ ಕುಮಾರ್ ನಿರ್ದೇಶನದ ‘ಸಿಂಹ ಹಾಕಿದ ಹೆಜ್ಜೆ’ ಚಿತ್ರದಲ್ಲಿ ಸೋನು ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. 2019 ರಂದು ”ಅನುಷ್ಕಾ” ಸಿನಿಮಾದಲ್ಲಿ ತೆರೆ ಹಂಚಿಕೊಂಡರು. ಬಳಿಕ ‘ಲವ್ ಮಾಕ್ಟೇಲ್’ ನಲ್ಲಿ ಜೋಶಿತಾ ಪಾತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು.

ನಟಿ ಅಮೃತ ಅಯ್ಯಂಗಾರ್ ಕಳೆದ ವರ್ಷ ‘ಗುರುದೇವ್ ಹೊಯ್ಸಳ’ ಹಾಗೂ ‘ಅಬ್ಬಬ್ಬಾ‘ ದಲ್ಲಿ ತೆರೆ ಹಂಚಿಕೊಂಡಿದ್ದು,  ಇತ್ತೀಚಿಗೆ ‘ಜೀಬ್ರಾ’  ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.  ಈಗಾಗಲೇ  ಮತ್ತೊಂದು ಸಿನಿಮಾ ಬಗ್ಗೆ  ಘೋಷಣೆಯಾಗಿದ್ದು, ಇದರ ಶೀರ್ಷಿಕೆ ಇಂದು ಅನಾವರಣಗೊಳ್ಳುವ ಸಾಧ್ಯತೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಸಾಮಾಜಿಕ ಜಾಲತಾಣದಲ್ಲಿ  ಹಲವಾರು ಸಿನಿ ತಾರೆಯರು ಅಮೃತ ಅಯ್ಯಂಗಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ

For Latest News Updates, Join Our Whatsapp Community🚩
RELATED ARTICLES

Most Popular