ಬೆಂಗಳೂರು: ಬೆಂಗಳೂರಿನಲ್ಲಿ ರಾತ್ರೋರಾತ್ರಿ ಸಿಲಿಂಡರ್ ಸ್ಫೋಟವಾಗಿದೆ. ಸಾರ್ವಜನಿಕರು ಬಾಂಬ್ ಬ್ಲಾಸ್ಟ್ ಎಂದು ಬೆಚ್ಚಿಬಿದ್ದಿದ್ದಾರೆ.
ಹುಳಿಮಾವು ಏರಿಯಾದ ಎಸ್.ಬಿ.ಐ. ಬ್ಯಾಂಕ್ ಬಳಿ ಸಿಲಿಂಡರ್ ಸ್ಪೋಟವಾಗಿದೆ. ಸ್ಟೀಲ್ ಪಾತ್ರೆ ಅಂಗಡಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ನಿನ್ನೆ ರಾತ್ರಿ 10:30ರ ಸುಮಾರಿಗೆ ಸಿಲಿಂಡರ್ ಸ್ಪೋಟವಾಗಿದೆ. ರಾಹುಲ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊರಗೆ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಹಾಕಲಾಗಿತ್ತು. ಚಾರ್ಜರ್ ತೆಗೆಯುವ ವೇಳೆ ಶಾರ್ಟ್ ಆಗಿ ಸ್ಪೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಅಂಗಡಿ ಹೊರಗೆ ನಿಲ್ಲಿಸಿದ್ದ ಎರಡು ಬೈಕುಗಳು ಛಿದ್ರವಾಗಿದೆ. ಇನ್ನೂರು ಮೀಟರ್ ವರೆಗೂ ಸ್ಫೋಟದ ಸದ್ದು ಕೇಳಿಸಿದೆ. ಅಕ್ರಮ ಗ್ಯಾಸ್ ರೀ ಫಿಲಿಂಗ್ ಸ್ಪೋಟಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಅಕ್ಕಪಕ್ಕದ ಅಂಗಡಿಯವರು, ನಿವಾಸಿಗಳು ಸ್ಪೋಟದ ಸದ್ದಿನಿಂದ ಆತಂಕಗೊಂಡಿದ್ದರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.