HomeInternationalWatch Video: 13 ನೇ ಅಂತಸ್ತಿನಿಂದ ಬಿದ್ದರೂ ಪವಾಡಸದೃಶ ರೀತಿಯಲ್ಲಿ ಪಾರಾದ ಯುವತಿ.....!

Watch Video: 13 ನೇ ಅಂತಸ್ತಿನಿಂದ ಬಿದ್ದರೂ ಪವಾಡಸದೃಶ ರೀತಿಯಲ್ಲಿ ಪಾರಾದ ಯುವತಿ…..!

ರಷ್ಯಾದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. 22 ವರ್ಷದ ಯುವತಿಯೊಬ್ಬಳು 13ನೇ ಅಂತಸ್ತಿನಿಂದ ಕೆಳಗೆ ಬಿದ್ದರೂ ಪವಾಡಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರಾಗಿದ್ದಾಳೆ. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

Daily wrap ಈ ಕುರಿತಂತೆ ವರದಿ ಮಾಡಿದ್ದು, ಇದರ ವಿಡಿಯೋ ಜುಲೈ 23 ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಈಗಾಗಲೇ ಲಕ್ಷಾಂತರ ವೀಕ್ಷಣೆಗಳು ಬಂದಿವೆ.

ವಿಡಿಯೋದಲ್ಲಿ ಕಂಡು ಬಂದಂತೆ 13ನೇ ಅಂತಸ್ತಿನಿಂದ ಬೀಳುವ ಈ ಯುವತಿ ಕಟ್ಟಡದ ಮುಂಭಾಗದ ಹುಲ್ಲಿನ ಹಾಸಿನ ಮೇಲೆ ಬಿದ್ದಿದ್ದಾಳೆ. ಅವಳಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿದ್ದು ಕೂಡಲೇ ಎದ್ದು ಕುಳಿತಿದ್ದಾಳೆ. ಆಕೆಯನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಜೀವಾಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular