ಡಿಜಿಟಲ್ ಡೆಸ್ಕ್ : ‘ಡೆಲಿವರಿ ಬಾಯ್’ ಮೇಲೆ ಪಿಟ್ಬುಲ್ ನಾಯಿ ದಾಳಿ ಮಾಡಿದ್ದು, ಸಹಾಯಕ್ಕಾಗಿ ಅಂಗಲಾಚಿದ ಯುವಕ ಕೊನೆಗೆ ಕಾರು ಏರಿ ನಾಯಿಯಿಂದ ಬಚಾವ್ ಆಗಿದ್ದಾನೆ. ಘಟನೆಯ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.
ಛತ್ತೀಸ್ಗಢದ ರಾಯ್ಪುರದಲ್ಲಿ ಆಹಾರ ಡೆಲಿವರಿ ಕೊಡಲು ಬಂದ ಯವಕನ ಮೇಲೆ ಎರಡು ಪಿಟ್ಬುಲ್ ನಾಯಿಗಳು ದಾಳಿ ಮಾಡಿವೆ. ಖಮರ್ದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಅನುಪಮ್ ನಗರದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಡೆಲಿವರಿ ಮ್ಯಾನ್ ಸಲ್ಮಾನ್ ಖಾನ್ ಮೇಲೆ ಇಬ್ಬರು ಪಿಟ್ ಬುಲ್ ಗಳು ದಾಳಿ ನಡೆಸಿದೆ.
ವೀಡಿಯೊದಲ್ಲಿ ಸಲ್ಮಾನ್ ಅವರನ್ನು ನಾಯಿಗಳು ಕಚ್ಚಿವೆ ಮತ್ತು ನೋವಿನಿಂದ ಅವರು ನರಳುತ್ತಿದ್ದರೆ, ದುರದೃಷ್ಟವಶಾತ್, ಯಾರೂ ಅವನ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಅವನು ಹೊರಗೆ ಹೋಗಿ ನಿಲ್ಲಿಸಿದ್ದ ಕಾರಿನ ಮೇಲೆ ಹತ್ತಿ ಬವಾಚ್ ಆಗಿದ್ದಾನೆ. ನಾಯಿಗಳು ಹೊರಟುಹೋದ ನಂತರ, ಯಾರೋ ಅವನಿಗೆ ನೀರಿನ ಬಾಟಲಿಯನ್ನು ನೀಡಿದ್ದಾರೆ.
A delivery boy named Salman Khan was attacked by a Pitbull in Raipur.
I hope action will be taken against the owners in this case.
Govt of India has recently banned sale and breeding of Pitbull & 23 other dangerous dog breeds in India. pic.twitter.com/n2pK55jeYw
— Incognito (@Incognito_qfs) July 16, 2024

