HomeKarnatakaಹೃದಯ ಶಸ್ತ್ರಚಿಕಿತ್ಸಕ, ಪದ್ಮ ವಿಭೂಷಣ ಪ್ರೊ.ಎಂ.ಎಸ್.ವಲಿಯಥಾನ್ ಇನ್ನಿಲ್ಲ

ಹೃದಯ ಶಸ್ತ್ರಚಿಕಿತ್ಸಕ, ಪದ್ಮ ವಿಭೂಷಣ ಪ್ರೊ.ಎಂ.ಎಸ್.ವಲಿಯಥಾನ್ ಇನ್ನಿಲ್ಲ

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮೊದಲ ಉಪಕುಲಪತಿ ಹಾಗೂ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಪದ್ಮ ವಿಭೂಷಣ ಪ್ರೊ.ಮಾರ್ತಾಂಡ ವರ್ಮ ಶಂಕರನ್ ವಲಿಯಥಾನ್ ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಿಧನರಾಗಿದ್ದಾರೆ. ಪತ್ನಿ, ಮಗ ಹಾಗೂ ಮಗಳನ್ನು ಅಗಲಿದ್ದಾರೆ.

ಪ್ರೊ.ಎಂ.ಎಸ್.ವಲಿಯಥಾನ್ ಮಣಿಪಾಲದ ಎಂಹೆಚ್ ಇ ಯುನಿವೆರ್ಸಿಟಿಯ ವಿಶ್ರಾಂತ ಉಪಕುಲಪತಿಯಾಗಿದ್ದರು. ಭಾರತೀಯ ವೈದ್ಯಕೀಯ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿ, ಹೃದಯಶಸ್ತ್ರಚಿಕಿತ್ಸೆ ಹಾಗೂ ವೈದ್ಯಕೀಯ ತಂತ್ರಜ್ಞಾನಕ್ಕೆ ಅವರು ನೀಡಿದ್ದ ಸೇವೆಗಾಗಿ ಪದ್ಮ ವಿಭೂಷಣ ಗೌರವ, ಪದ್ಮಶ್ರೀ, ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular