ಕೊಡಗು : ಅಪ್ರಾಪ್ತ ಬಾಲಕನೋರ್ವ ಮದ್ಯದ ಅಮಲಿನಲ್ಲಿ ಅಜ್ಜಿಯನ್ನೇ ಕೊಂದ ಭೀಕರ ಘಟನೆ ಕೊಡಗಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬೆಟೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಎರವರ ಜಾನಕಿ (45) ಎಂದು ಗುರುತಿಸಲಾಗಿದೆ.
ಮದ್ಯಪಾನ ಮಾಡಿ ಬಂದ ಮೊಮ್ಮಗ ಅಜ್ಜಿ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ವಿರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.