HomeKarnatakaಮೀಸಲಾತಿಗೆ ಆಗ್ರಹಿಸಿ ಶಾಸಕರ ಮನೆ ಮುಂದೆ ಬ್ಯಾನರ್ ಹಿಡಿದು ನಿಂತ ಪಂಚಮಸಾಲಿ ಶ್ರೀಗಳು...!

ಮೀಸಲಾತಿಗೆ ಆಗ್ರಹಿಸಿ ಶಾಸಕರ ಮನೆ ಮುಂದೆ ಬ್ಯಾನರ್ ಹಿಡಿದು ನಿಂತ ಪಂಚಮಸಾಲಿ ಶ್ರೀಗಳು…!

ಲಿಂಗಾಯಿತ ಪಂಚಮಸಾಲಿ ಜನಾಂಗಕ್ಕೆ 2A ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಬಹುಕಾಲದಿಂದಲೂ ಹೋರಾಟ ನಡೆಸುತ್ತಿರುವ ಕೂಡಲಸಂಗಮದ ಗುರುಗಳಾದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿ ಇಂದು ಶಿವಮೊಗ್ಗ ಕ್ಷೇತ್ರದ ಶಾಸಕರಾದ ಚನ್ನಬಸಪ್ಪನವರ ಮನೆ ಮುಂದೆ ಬ್ಯಾನರ್ ಹಿಡಿದು ನಿಂತಿದ್ದಾರೆ.

ಸಮಾಜದ ಬಂಧುಗಳೊಂದಿಗೆ ಶಾಸಕ ಚನ್ನಬಸಪ್ಪನವರ ಮನೆ ಮುಂದೆ ಬ್ಯಾನರ್ ಹಿಡಿದು ನಿಂತ ಶ್ರೀಗಳು ನ್ಯಾಯಯುತವಾಗಿ ನಾವುಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಗಳನ್ನು ತಮ್ಮ ಮನೆಯೊಳಗೆ ಕರೆದುಕೊಂಡು ಹೋದ ಶಾಸಕ ಚನ್ನಬಸಪ್ಪ ಸತ್ಕಾರ್ಯ ನಡೆಸಿ ಗೌರವಿಸಿದ್ದು, ಶ್ರೀ ಗಳ ಅಹವಾಲನ್ನು ರಾಜ್ಯ ಸರ್ಕಾರದ ಮುಂದೆ ಮಂಡಿಸುವುದಾಗಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular