HomeEntertainment'ಮಿಸ್ಟರ್ ಬಚ್ಚನ್' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ಮಿಸ್ಟರ್ ಬಚ್ಚನ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ರವಿತೇಜ ಅಭಿನಯದ‌, ಹರೀಶ್ ಶಂಕರ್ ನಿರ್ದೇಶನದ ‘ಮಿಸ್ಟರ್ ಬಚ್ಚನ್’ ಚಿತ್ರದ ಸಿತಾರ್ ಎಂಬ ಲಿರಿಕಲ್ ಹಾಡನ್ನು ಇಂದು ಟಿ ಸೀರೀಸ್ ತೆಲುಗು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಾಕೇತ್ ಕೊಮುಂದೂರಿ ಹಾಗೂ ಸಮೀರಾ ಭಾರದ್ವಾಜ್ ಈ ಹಾಡಿಗೆ ಧ್ವನಿಯಾಗಿದ್ದು, ಮಿಕ್ಕಿ ಜೆ ಮೇಯರ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಲ್ಲಿ ಟಿಜಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಿದ್ದು, ವಿವೇಕ್ ಕೂಚಿಬೋಟ್ಲ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ರವಿತೇಜ, ಭಾಗ್ಯಶ್ರೀ ಬೋರ್ಸೆ ಹಾಗೂ ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಜ್ವಲ್ ಕುಲಕರ್ಣಿ ಸಂಕಲನವಿದ್ದು, ರಾಮ್ ಲಕ್ಷ್ಮಣ್ ಹಾಗೂ ಪೃಥ್ವಿ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular