alex Certify ಜೀವನ ನಿರ್ವಹಣೆಗೆ ದಿನಕ್ಕೆರೆಡು ಕೆಲಸ ಮಾಡುತ್ತಿದ್ದ ಮಹಿಳೆಗೆ ಖುಲಾಯಿಸಿದ ಅದೃಷ್ಟ; 100 ರೂ. ಹೂಡಿಕೆಗೆ ಬಂತು 2 ಕೋಟಿ ರೂಪಾಯಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನ ನಿರ್ವಹಣೆಗೆ ದಿನಕ್ಕೆರೆಡು ಕೆಲಸ ಮಾಡುತ್ತಿದ್ದ ಮಹಿಳೆಗೆ ಖುಲಾಯಿಸಿದ ಅದೃಷ್ಟ; 100 ರೂ. ಹೂಡಿಕೆಗೆ ಬಂತು 2 ಕೋಟಿ ರೂಪಾಯಿ….!

ಬದುಕು ಕಟ್ಟಿಕೊಳ್ಳಲು ಥೈಲ್ಯಾಂಡ್ ನಿಂದ ಯುನೈಟೆಡ್ ಕಿಂಗ್ಡಂ ಗೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಜೀವನ ನಿರ್ವಹಣೆಗೆ ಒಟ್ಟು 14 ಗಂಟೆಗಳ ಕಾಲ ದಿನಕ್ಕೆ ಎರಡು ಕೆಲಸ ಮಾಡುತ್ತಿದ್ದು, ಇದೀಗ ಅವರಿಗೆ ಅದೃಷ್ಟ ಖುಲಾಯಿಸಿದೆ.

ಅರಾಯ ಕರ್ರಿ ಎಂಬ ಈ ಮಹಿಳೆ 106 ರೂಪಾಯಿ (€ 1) ಹೂಡಿಕೆಯಿಂದ ಬೆಟ್ಟಿಂಗ್ ಮಾಡಿದ್ದ ಸಂಖ್ಯೆಗೆ ಬರೋಬ್ಬರಿ 2.13 ಕೋಟಿ ರೂಪಾಯಿ (£ 200,000) ಲಭಿಸಿದೆ. ಇದೀಗ ಅರಾಯ ತನ್ನ ಕುಟುಂಬ ಸಮೇತ ತಾಯಿನಾಡು ಥೈಲ್ಯಾಂಡ್ ಗೆ ತೆರಳಲು ಸಜ್ಜಾಗಿದ್ದಾಳೆ.

ಈ ಬೆಟ್ಟಿಂಗ್ ಗೇಮ್ ನಲ್ಲಿ 1 ರಿಂದ 50 ಸಂಖ್ಯೆ ಒಳಗೆ ಆರು ಅಂಕಿಗಳನ್ನು ಹೊಂದಿಸಬೇಕಿದ್ದು, ವಿಜೇತರಿಗೆ ಭಾರಿ ಮೊತ್ತದ ಬಹುಮಾನ ಸಿಗುತ್ತದೆ. ಈ ಮೊದಲು ಅರಾಯ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕ್ಲೀನರ್ ಆಗಿ ಹಾಗೂ ರಾತ್ರಿ ರೆಸ್ಟೋರೆಂಟ್ ನಲ್ಲಿ ಪರಿಚಾರಕಿಯಾಗಿ ಕೆಲಸ ಮಾಡುತ್ತಿದ್ದಳು.

ಇದೀಗ ತನ್ನ ಈ ಕೆಲಸಗಳಿಗೆ ಗುಡ್ ಬೈ ಹೇಳಿ ಥೈಲ್ಯಾಂಡ್ ಗೆ ತೆರಳುತ್ತಿದ್ದು, ಈಗಾಗಲೇ ಅಲ್ಲಿ ಆಕೆಯ ಕುಟುಂಬಕ್ಕೆ ಮನೆ ಸಿದ್ದವಾಗುತ್ತಿದೆ ಎನ್ನಲಾಗಿದೆ. 40 ವರ್ಷದ ಅರಾಯಾ ತನ್ನ ಇನ್ನುಳಿದ ಜೀವನವನ್ನು ಕುಟುಂಬಸ್ಥರೊಂದಿಗೆ ಥೈಲ್ಯಾಂಡ್ ನಲ್ಲಿಯೇ ಕಳೆಯಲು ನಿರ್ಧರಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...