alex Certify RR ಸಂಖ್ಯೆಗೆ ಆಧಾರ್ ಲಿಂಕ್ ಮಾಡಿಸದ ಐಪಿ ಸೆಟ್ ಗ್ರಾಹಕರಿಗೆ ಸಬ್ಸಿಡಿ ಇಲ್ಲ, ಸಂಪರ್ಕ ಕಡಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RR ಸಂಖ್ಯೆಗೆ ಆಧಾರ್ ಲಿಂಕ್ ಮಾಡಿಸದ ಐಪಿ ಸೆಟ್ ಗ್ರಾಹಕರಿಗೆ ಸಬ್ಸಿಡಿ ಇಲ್ಲ, ಸಂಪರ್ಕ ಕಡಿತ

ಎಲ್ಲಾ ಐ.ಪಿ ಸೆಟ್ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ಐಪಿ ಸೆಟ್ ಆರ್.ಆರ್. ಸಂಖ್ಯೆಗೆ ಜೋಡಿಸಿಕೊಳ್ಳಬೇಕು.

“ಕೆ.ಇ.ಆರ್.ಸಿ” ಬೆಂಗಳೂರು, ಕಳೆದ ವಾರ ಎಲ್ಲಾ ಐಪಿ ಸೆಟ್ ಆರ್.ಆರ್. ಸಂಖ್ಯೆಗಳಿಗೆ ಗ್ರಾಹಕರ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡಬೇಕು, ವಿಫಲವಾದರೆ, ಲಿಂಕ್ ಮಾಡದ ಆರ್.ಆರ್. ಸಂಖ್ಯೆಗಳಿಗೆ ಸರ್ಕಾರವು ಸಬ್ಸಿಡಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು ಆದೇಶಿಸಿದೆ.

ಹಾಗಾಗಿ ಸಂಬಂಧಪಟ್ಟ ಲೈನ್‍ಮ್ಯಾನ್, ಮೀಟರ್ ರೀಡರ್, ಜಿ.ವಿ.ಪಿ, ಶಾಖಾಧಿಕಾರಿಗಳು ಅಥವಾ ಜೆಸ್ಕಾಂ ಗ್ರಾಮೀಣ ಉಪ-ವಿಭಾಗ ಕಛೇರಿಗೆ ಸಂಪರ್ಕಿಸಿ ತಮ್ಮ ಆಧಾರ್ ಸಂಖ್ಯೆಯನ್ನು ಐ.ಪಿ ಸೆಟ್ ಆರ್.ಆರ್ ಸಂಖ್ಯೆಗೆ ಜೋಡಿಸಿಕೊಳ್ಳಬೇಕು, ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಐ.ಪಿ.ಸೆಟ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಕ ಇಂಜಿನಿಯರ್ ಮೋಹನಬಾಬು ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...