HomeKarnatakaGOOD NEWS : ಅವಿವಾಹಿತ ಯುವಕರಿಗೆ ‘ವಿವಾಹ ಭಾಗ್ಯ' ; ರಾಜ್ಯ ಸರ್ಕಾರದಿಂದ ʼಜೀವನ...

GOOD NEWS : ಅವಿವಾಹಿತ ಯುವಕರಿಗೆ ‘ವಿವಾಹ ಭಾಗ್ಯ’ ; ರಾಜ್ಯ ಸರ್ಕಾರದಿಂದ ʼಜೀವನ ಸಂಗಮʼ ಪೋರ್ಟಲ್ ಆರಂಭ..!

ಉತ್ತರ ಕನ್ನಡ : ಅವಿವಾಹಿತ ಯುವಕರಿಗೆ ‘ವಿವಾಹ ಭಾಗ್ಯ’ ಕಲ್ಪಿಸಲು ಜಿಲ್ಲಾಡಳಿತ ʼಜೀವನ ಸಂಗಮʼ ಪೋರ್ಟಲ್ ಓಪನ್ ಮಾಡಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಜೀವನ ಸಂಗಮʼ ಎಂಬ ಪೋರ್ಟಲ್ ಆರಂಭಿಸಿರುವ ಉತ್ತರ ಕನ್ನಡ ಜಿಲ್ಲಾಡಳಿತ ವಿನೂತನ ಪ್ರಯೋಗ ಕೈಗೊಂಡಿದೆ. ಜಿಲ್ಲೆಯಲ್ಲಿನ ಅವಿವಾಹಿತ ರೈತರು, ವಿಕಲಚೇತನರು, ವಿಧವೆಯರಿಗೆ ಸೂಕ್ತ ಸಂಗಾತಿ ಆರಿಸಲು ಹಾಗೂ ಹೆಚ್ಐವಿ ಪೀಡಿತ ವ್ಯಕ್ತಿಗಳಿಗೆ ಅದೇ ಸಮುದಾಯದ ವ್ಯಕ್ತಿಯ ನಡುವೆ ವೈವಾಹಿಕ ಸಂಬಂಧವನ್ನು ಬೆಸೆದು ಅವರು ವಿವಾಹವಾಗಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.

ಈ ಪೋರ್ಟಲ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಲು ಸಂಪೂರ್ಣ ಬದ್ಧವಾಗಿದ್ದು, ಎಲ್ಲಾ ಡೇಟಾವನ್ನು ಗೌಪ್ಯವಾಗಿ ಇರಿಸಿ, ವಿವಾಹ ಹೊಂದಾಣಿಕೆಯ ಉದ್ದೇಶಕ್ಕಾಗಿ ಮಾತ್ರ ಮಾಹಿತಿಯನ್ನು ಬಳಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಅರ್ಹ ಯುವಕ ಯುವತಿಯರಿಗೆ ಮಾತ್ರ ಈ ವಿವಾಹ ನೋಂದಣಿ ವೇದಿಕೆ ಒದಗಿಸಲಿದ್ದು, ಜಿಲ್ಲೆಯ ನಿವಾಸಿಗಳಿಗೆ ಮಾತ್ರ ಇದರ ನೆರವು ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular