HomeLatest NewsSHOCKING : ಹೃದಯಾಘಾತದಿಂದ ಕುಸಿದು ಬಿದ್ದು 9 ವರ್ಷದ ಬಾಲಕ ಸಾವು

SHOCKING : ಹೃದಯಾಘಾತದಿಂದ ಕುಸಿದು ಬಿದ್ದು 9 ವರ್ಷದ ಬಾಲಕ ಸಾವು

ತೆಲಂಗಾಣದ ಜಗಿತಿಯಾಲ ಜಿಲ್ಲೆಯಲ್ಲಿ ಅತ್ಯಂತ ದುರದೃಷ್ಟಕರ ಘಟನೆಯೊಂದು ನಡೆದಿದೆ. ಜಿಲ್ಲೆಯ ಜಗಿತಿಯಾಲ ರೂರಲ್ ಮಂಡಲದ ಪೊರಂಡ್ಲ ಗ್ರಾಮದ 9 ವರ್ಷದ ಬಾಲಕ ನಿಶಾಂತ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಅನ್ನದಾನ ಕಾರ್ಯಕ್ರಮಕ್ಕೆ ಹೋಗಿದ್ದ 9 ವರ್ಷದ ಶಾಲಾ ಬಾಲಕನೊಬ್ಬ ದಿಢೀರ್ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾನೆ. 3ನೇ ತರಗತಿ ಓದುತ್ತಿದ್ದ ನಿಶಾಂತ್ ಎಂಬ ಬಾಲಕ ಕಾರ್ಯಕ್ರಮದ ನಡುವೆಯೇ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಪ್ರಾಣ ಬಿಟ್ಟಿದ್ದಾನೆ. ಅತಿ ಚಿಕ್ಕ ವಯಸ್ಸಿನಲ್ಲೇ ಬಾಲಕ ಹೃದಯಾಘಾತಕ್ಕೆ ಬಲಿಯಾಗಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ನಿಶಾಂತ್ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದನು. ಸೋಮವಾರದಂದು ಗ್ರಾಮದಲ್ಲಿ ನಡೆದಿದ್ದ ಅನ್ನದಾನ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.ಅನ್ನದಾನದ ಸ್ಥಳದಲ್ಲಿ ನಿಶಾಂತ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಗಾಬರಿಗೊಂಡ ಕುಟುಂಬ ಸದಸ್ಯರು ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು.ಆದರೆ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಬಾಲಕ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾನೆ. ಅತಿ ಚಿಕ್ಕ ವಯಸ್ಸಿನ ಬಾಲಕನ ಈ ಅನಿರೀಕ್ಷಿತ ಸಾವು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ. ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular