HomeCrime81 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿ ಖಾಕಿ ಅತಿಥಿಯಾದ 85 ವರ್ಷದ ವೃದ್ಧ

81 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿ ಖಾಕಿ ಅತಿಥಿಯಾದ 85 ವರ್ಷದ ವೃದ್ಧ

ಐರ್ಲೆಂಡ್ ನಲ್ಲಿ 81 ವರ್ಷದ ಮಹಿಳೆಯನ್ನು 85 ವರ್ಷದ ವೃದ್ಧ ಕೊಲೆ ಮಾಡಿದ್ದಾನೆ. ಹತ್ಯೆ ಬಳಿಕ ಕೋರ್ಟ್ ಗೆ ಹಾಜರಾಗಿದ್ದು, ಮಹಿಳೆಯನ್ನು ಕೊಂದ ಆರೋಪದ ಮೇಲೆ ಆತನನ್ನು ಕಸ್ಟಡಿಗೆ ನೀಡಲಾಗಿದೆ.

ಐರ್ಲೆಂಡ್ ನ ಕ್ಲ್ಯಾಂಡೆಬಾಯ್ ನ ವ್ಯಕ್ತಿ ಮಹಿಳೆಯನ್ನು ಕೊಂದಿದ್ದು ನ್ಯೂಟೌನಾರ್ಡ್ಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದ.

ಭಾನುವಾರದಂದು ಬ್ಯಾಂಗೋರ್‌ನ ಹಾಥಾರ್ನ್ ಕೋರ್ಟ್ ಪ್ರದೇಶದ ಮನೆಯೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಜಿಲ್ಲಾ ನ್ಯಾಯಾಧೀಶರ ಮುಂದೆ ಪ್ರಕರಣದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ ನಂತರ ಆರೋಪಿಯನ್ನು ಬಂಧನದಲ್ಲಿರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿಯು ಜಾಮೀನು ಅರ್ಜಿ ಸಲ್ಲಿಸಿಲ್ಲ ಎಂಬುದು ಗೊತ್ತಾಗಿದ್ದು ಜೂನ್ 26ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಧೀಶರು ಕಸ್ಟಡಿಗೆ ಒಪ್ಪಿಸಿದರು. ಕೋರ್ಟ್ ನಿಂದ ಕರೆದೊಯ್ಯುವಾಗ ಆರೋಪಿ ಸಾರ್ವಜನಿಕರತ್ತ ಕೈ ಬೀಸಿದ್ದ.

For Latest News Updates, Join Our Whatsapp Community🚩
RELATED ARTICLES

Most Popular