HomeLatest News8 ಅಡಿ 10 ಇಂಚು ಉದ್ದದ ಕೂದಲು ಬೆಳೆಸಿ ಉಕ್ರೇನ್ ಮಹಿಳೆಯ ದಾಖಲೆ ಮುರಿದ ಭಾರತೀಯ...

8 ಅಡಿ 10 ಇಂಚು ಉದ್ದದ ಕೂದಲು ಬೆಳೆಸಿ ಉಕ್ರೇನ್ ಮಹಿಳೆಯ ದಾಖಲೆ ಮುರಿದ ಭಾರತೀಯ ಮಹಿಳೆ

ಡೆಹ್ರಾಡೂನ್: ಕೇಶರಾಶಿಯನ್ನು ಸೊಂಟದವರೆಗೆ ಬೆಳೆಸುವುದೇ ಇಂದಿನ ದಿನಗಳಲ್ಲಿ ಸವಾಲಿನ ಕೆಲಸ. ಆದರೆ ಉತ್ತರಾಖಂಡದ ಹಲ್ದ್ವಾನಿ ನಿವಾಸಿ ರೇಣು ಧರಿಯಾಲ್ ಬರೋಬ್ಬರಿ 8 ಅಡಿ 10 ಇಂಚು (271.50 ಸೆಂಟಿಮೀಟರ್) ಉದ್ದದ ಕೂದಲು ಬೆಳೆಸುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Records) ಪುಟಕ್ಕೆ ಸೇರಿದ್ದಾರೆ. ಪ್ರಸ್ತುತ ವಿಶ್ವದಲ್ಲೇ ಅತ್ಯಂತ ಉದ್ದನೆಯ ಕೂದಲು ಹೊಂದಿರುವ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಹಲ್ದ್ವಾನಿಯಲ್ಲಿ ಗಿನ್ನೆಸ್ ಸಂಸ್ಥೆಯ ಪ್ರತಿನಿಧಿಗಳು ರೇಣು ಅವರ ಕೂದಲಿನ ಅಳತೆಯನ್ನು ಅಧಿಕೃತವಾಗಿ ಪರಿಶೀಲಿಸಿದ್ದು, ಈ ಹಿಂದೆ ಉಕ್ರೇನ್‌ನ ಅಲಿಯಾ ನಾಸಿರೋವಾ (8 ಅಡಿ 5 ಇಂಚು) ಹೆಸರಿನಲ್ಲಿದ್ದ ಜಾಗತಿಕ ದಾಖಲೆಯನ್ನು ರೇಣು ಧರಿಯಾಲ್ ಮುರಿದಿದ್ದಾರೆ.

ಉಕ್ರೇನ್ ಮಹಿಳೆಯ ದಾಖಲೆ ಧೂಳೀಪಟ

ಈ ಹಿಂದೆ ಉಕ್ರೇನ್ ದೇಶದ ಅಲಿಯಾ ನಾಸಿರೋವಾ (257.33 ಸೆಂಟಿಮೀಟರ್ – 8 ಅಡಿ 5.3 ಇಂಚು) ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ರೇಣು ಮುರಿದಿದ್ದಾರೆ. ಗಿನ್ನೆಸ್ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ಅವರ ಕೂದಲು ನೆಲದ ಮೇಲೆ ಹರಿದಾಡುತ್ತಿರುವುದು ಕಾಣಿಸುತ್ತದೆ. ದಿನನಿತ್ಯ ಅವರು ಕೂದಲನ್ನು ಜಡೆ ಕಟ್ಟಿ ಕಂಟ್ರೋಲ್‌ನಲ್ಲಿಟ್ಟುಕೊಳ್ಳುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯೂಟ್ಯೂಬರ್ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ರೇಣು, 2015 ರಿಂದ ಅಂದರೆ ಕಳೆದ 10 ವರ್ಷಗಳಿಂದ ತಮ್ಮ ಕೂದಲನ್ನು ಒಮ್ಮೆಯೂ ಕತ್ತರಿಸಿಲ್ಲ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಉದ್ದನೆಯ ಕೂದಲನ್ನು ಸೌಂದರ್ಯ ಹಾಗೂ ಸಾಂಸ್ಕೃತಿಕ ಗುರುತಿನ ಸಂಕೇತವಾಗಿ ಕಾಣಲಾಗುತ್ತದೆ, ಇದೇ ತಮಗೆ ಸ್ಫೂರ್ತಿ ಎಂದು ಅವರು ತಿಳಿಸಿದ್ದಾರೆ

https://x.com/GWR/status/2085681268537139319

ಉದ್ದ ಕೂದಲಿನ ಸೀಕ್ರೆಟ್ ಏನು?

ಇಷ್ಟೊಂದು ಉದ್ದದ ಕೂದಲನ್ನು ಪಾಲನೆ ಮಾಡುವುದು ಸುಲಭದ ಮಾತಲ್ಲ. ಈ ಬಗ್ಗೆ ಮಾತನಾಡಿರುವ ರೇಣು, “ಉದ್ದನೆಯ ಕೂದಲನ್ನು ನಿರ್ವಹಿಸಲು ಅಪಾರ ತಾಳ್ಮೆ ಬೇಕು. ಕೂದಲನ್ನು ತೊಳೆಯಲು ಮತ್ತು ಸಿಕ್ಕು ಬಿಡಿಸಲು ನನಗೇ ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ,” ಎಂದಿದ್ದಾರೆ.

ಸಂಪೂರ್ಣ ನೈಸರ್ಗಿಕ ಆರೈಕೆ: ರಾಸಾಯನಿಕಯುಕ್ತ ಪ್ರಾಡಕ್ಟ್‌ಗಳಿಂದ ಸಂಪೂರ್ಣವಾಗಿ ದೂರವಿರುವ ರೇಣು, ಯಾವುದೇ ದುಬಾರಿ ಚಿಕಿತ್ಸೆ ಪಡೆಯದೆ ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಎಣ್ಣೆ ಹಾಗೂ ಶಾಂಪೂಗಳನ್ನು ಮಾತ್ರ ಬಳಸುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್: ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನೈಸರ್ಗಿಕ ಕೂದಲು ಆರೈಕೆ ಸಲಹೆಗಳನ್ನು ಹಂಚಿಕೊಳ್ಳುವ ಇವರಿಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕಮೆಂಟ್ಸ್

ಗಿನ್ನೆಸ್ ಸಂಸ್ಥೆ ಈ ದಾಖಲೆಯನ್ನು ಪ್ರಕಟಿಸುತ್ತಿದ್ದಂತೆ ಜಾಲತಾಣದಲ್ಲಿ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ನೆಟ್ಟಿಗ “ನನಗೆ ತಲೆಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ, ಆದರೆ ಇವರು ತಲೆಯ ಮೇಲೆ ಕೂದಲಿನ ಸ್ಟೋರ್ ತೆರೆದಿದ್ದಾರೆ” ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಮತ್ತೊಬ್ಬರು “ಭಾರತದ ಗ್ರಾಮೀಣ ಭಾಗಗಳಲ್ಲಿ ಬೆಳಕಿಗೆ ಬಾರದ ಇಂತಹ ಅದೆಷ್ಟೋ ದಾಖಲೆಗಳಿವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಸಾಧನೆಯ ಕುರಿತು ಹರ್ಷ ವ್ಯಕ್ತಪಡಿಸಿರುವ ರೇಣು, ದೃಢಸಂಕಲ್ಪ ಸತತ ಪ್ರಯತ್ನ ಮತ್ತು ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡರೆ ಯಾವುದೇ ದೊಡ್ಡ ಮೈಲಿಗಲ್ಲನ್ನು ಸಾಧಿಸಬಹುದು ಎಂದು ಸಂದೇಶ ನೀಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular