ಲಕ್ನೋ: ಸೋಷಿಯಲ್ ಮೀಡಿಯಾ ಅಂದ್ರೆ ಬರೀ ಅದ್ದೂರಿ ಎಡಿಟಿಂಗ್, ಟ್ರೆಂಡಿಂಗ್ ಮ್ಯೂಸಿಕ್ ಅಬ್ಬರ ಅಂದುಕೊಂಡಿದ್ದೀರಾ? ಹಾಗಾದ್ರೆ ಈ ‘ದಾದಾ ಜಿ’ ಕಥೆ ಕೇಳಿ ನೀವು ಬೆರಗಾಗೋದು ಗ್ಯಾರಂಟಿ
ಕಲಿಕೆಗೆ ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಉತ್ತರ ಪ್ರದೇಶದ 70 ವರ್ಷದ ವಿನೋದ್ ಕುಮಾರ್ ಶರ್ಮಾ ಸಾಬೀತುಪಡಿಸಿದ್ದಾರೆ. ಯಾವುದೇ ಎಕ್ಸ್ಪೀರಿಯನ್ಸ್ ಇಲ್ಲದೆ ಇನ್ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ಈ ಅಜ್ಜ, ತಮ್ಮ ಚೊಚ್ಚಲ ವ್ಲಾಗ್ ಮೂಲಕವೇ ಇಡೀ ಇಂಟರ್ನೆಟ್ ಲೋಕವನ್ನೇ ಶೇಕ್ ಮಾಡಿದ್ದಾರೆ.
ಮುಗ್ಧತೆಯಿಂದ ಕೂಡಿದ ಇವರ ಕೇವಲ 2 ನಿಮಿಷದ ವಿಡಿಯೋ, ಬರೋಬ್ಬರಿ 3 ಕೋಟಿ (30 Million) ವೀಕ್ಷಣೆಗಳನ್ನು ಪಡೆಯುವ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದೆ. ಪ್ರೀತಿ ಮತ್ತು ಪ್ರಾಮಾಣಿಕತೆ ಮುಂದೆ ಫಿಲ್ಟರ್‌ಗಳ ಆಟ ನಡೆಯಲ್ಲ ಎಂಬುದಕ್ಕೆ ಈ ವೈರಲ್ ಅಜ್ಜನೇ ಸಾಕ್ಷಿ
ನನಗೆ ವ್ಲಾಗ್ ಮಾಡುವುದು ಗೊತ್ತಿಲ್ಲ, ಆದರೂ ಪ್ರಯತ್ನಿಸ್ತೀನಿ
ವಿನೋದ್ ಶರ್ಮಾ ಅವರು ತಮ್ಮ ಚೊಚ್ಚಲ ವಿಡಿಯೋದಲ್ಲಿ ಯಾವುದೇ ಮುಚ್ಚುಮರೆಯಿಲ್ಲದೆ ಮಾತನಾಡಿದ್ದಾರೆ. ನನ್ನ ಹೆಸರು ವಿನೋದ್ ಕುಮಾರ್ ಶರ್ಮಾ ನಾನು ಉತ್ತರ ಪ್ರದೇಶದವನು. ನಿಜ ಹೇಳ್ಬೇಕಂದ್ರೆ ನನಗೆ ಈ ವ್ಲಾಗ್ ಮಾಡೋದು ಅಂದ್ರೆ ಏನು ಅಂತಾನೇ ಗೊತ್ತಿಲ್ಲ. ಆದ್ರೆ ರಿಟೈರ್ಮೆಂಟ್ ಆದ್ಮೇಲೆ ಸುಮ್ನೆ ಕಾಲ ಕಳೆಯೋ ಬದಲು ಏನಾದ್ರೂ ಹೊಸತು ಮಾಡೋಣ ಅಂತ ಈ ಪ್ರಯತ್ನ ಮಾಡ್ತಿದ್ದೀನಿ ಎನ್ನುತ್ತಾ ಕ್ಯಾಮೆರಾ ಮುಂದೆ ನಿಂತ ಅವರ ಆತ್ಮವಿಶ್ವಾಸ ಅಚ್ಚರಿ ಮೂಡಿಸುವಂತಿದೆ.
ಅಷ್ಟಕ್ಕೇ ನಿಲ್ಲದ ಅವರು, ನನ್ನ ಈ ಪುಟ್ಟ ಪ್ರಯತ್ನ ನಿಮಗೆ ಇಷ್ಟ ಆದ್ರೆ, ಅದನ್ನೇ ನಾನು ದೊಡ್ಡ ಪ್ರೋತ್ಸಾಹ ಅಂತ ಅಂದುಕೊಂಡು ಮುಂದೆಯೂ ವಿಡಿಯೋ ಮಾಡ್ತೀನಿ ಅಂತ ಅತ್ಯಂತ ವಿನಯದಿಂದ ಕೇಳಿಕೊಂಡಿದ್ದಾರೆ. ಇಂದಿನ ಹೈ-ಫೈ ಜಗತ್ತಿನಲ್ಲಿ ಇವರ ಈ ಪ್ರಾಮಾಣಿಕ ಮತ್ತು ಮುಗ್ಧ ಮಾತುಗಳೇ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿವೆ
.72 ಗಂಟೆಗಳಲ್ಲಿ 3 ಕೋಟಿ ವೀಕ್ಷಣೆ ಈ ವಿಡಿಯೋ ಎಷ್ಟು ವೈರಲ್ ಆಗಿದೆ ಎಂದರೆ:
ವೀಕ್ಷಣೆ: ಆರಂಭದಲ್ಲಿ 22 ಮಿಲಿಯನ್ ಇದ್ದ ವ್ಯೂಸ್, ಈಗ 30 ಮಿಲಿಯನ್ ದಾಟಿದೆ.
ಲೈಕ್ಸ್: 20 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.
ಫಾಲೋವರ್ಸ್: ರಾತ್ರೋರಾತ್ರಿ ಅವರ ಇನ್ಸ್ಟಾಗ್ರಾಮ್ ಖಾತೆಗೆ 64,000ಕ್ಕೂ ಅಧಿಕ ಅಭಿಮಾನಿಗಳು ಸೇರ್ಪಡೆಯಾಗಿದ್ದಾರೆ.
ವಿನೋದ್ ಶರ್ಮಾ ಅವರ ಈ ಸಾಹಸಕ್ಕೆ ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ಟಿವಿ ಸ್ಟಾರ್ ಜಯ್ ಭಾನುಶಾಲಿ ಸೇರಿದಂತೆ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಮುಂದಿನ ವ್ಲಾಗ್‌ಗಾಗಿ ನಾನು ಕಾಯುತ್ತಿದ್ದೇನೆ” ಎಂದು ಜಯ್ ಭಾನುಶಾಲಿ ಕಮೆಂಟ್ ಮಾಡಿದ್ದಾರೆ
ವಿಡಿಯೋದಲ್ಲಿ ಯಾವುದೇ ಅದ್ದೂರಿ ತಂತ್ರಜ್ಞಾನವಾಗಲಿ ಅಥವಾ ಸಂಗೀತವಾಗಲಿ ಇಲ್ಲ. ನನಗೆ ವ್ಲಾಗ್ ಮಾಡುವುದು ಗೊತ್ತಿಲ್ಲ, ನಿವೃತ್ತಿಯ ನಂತರ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೇನೆ ಎಂಬ ಅವರ ಪ್ರಾಮಾಣಿಕ ಮಾತುಗಳೇ ಜನರನ್ನು ಸೆಳೆದಿವೆ.ಕಲಿಯಲು ವಯಸ್ಸಿನ ಹಂಗಿಲ್ಲ ಎಂಬುದನ್ನು ವಿನೋದ್ ಶರ್ಮಾ ಸಾಬೀತುಪಡಿಸಿದ್ದಾರೆ. ಫಿಲ್ಟರ್‌ಗಳಿಲ್ಲದ ಅವರ ಸಹಜ ಮಾತುಗಳು ಇಂದಿನ ಯುವ ಪೀಳಿಗೆಗೂ ಸ್ಫೂರ್ತಿಯಾಗಿವೆ.
https://www.instagram.com/reel/DTsp5N8k8Hw/?utm_source=ig_web_copy_link
ಜನರ ಭಾವನಾತ್ಮಕ ಕಮೆಂಟ್ಸ್
ವೀಕ್ಷಕರು ಇವರ ವಿಡಿಯೋ ನೋಡಿ ತಮ್ಮ ಪೋಷಕರು ಅಥವಾ ಅಜ್ಜ-ಅಜ್ಜಿಯರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಅಂಕಲ್, ನಾವು ನಿಮ್ಮ ಜೊತೆಗಿದ್ದೇವೆ ಎಂದು ಸಾವಿರಾರು ಜನರು ಬೆಂಬಲ ಸೂಚಿಸಿದ್ದಾರೆ. ವಿಶೇಷವಾಗಿ, ನನಗೆ ಬರುವ ವ್ಯಂಗ್ಯದ ಮಾತುಗಳು ಚಪ್ಪಾಳೆಗಳಾಗಿ ಬದಲಾಗುವವರೆಗೂ ನಾನು ನಿಲ್ಲುವುದಿಲ್ಲ ಎಂಬ ಅವರ ಮಾತು ಈಗ ಅನೇಕರಿಗೆ ಸ್ಫೂರ್ತಿಯಾಗಿದೆ.

