ಕೈಯಿಂದ ಜಾರಿದ 5 ರೂ. ಕಾಯಿನ್ ಹಿಡಿಯಲು ಹೋಗಿ ಘೋರ ದುರಂತ: ಆಯ ತಪ್ಪಿ ಬಾವಿಗೆ ಬಿದ್ದು ಬಾಲಕ ಸಾವು

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಉರುಳುತ್ತಿದ್ದ 5 ರೂಪಾಯಿ ನಾಣ್ಯ ಹಿಡಿಯಲು ಹೋಗಿ 7 ವರ್ಷದ ಬಾಲಕ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.

ನಾಣ್ಯದೊಂದಿಗೆ ಬಾಲಕ ಕನ್ಹಾ ಆಟವಾಡುತ್ತಿದ್ದಾಗ ಅದು ಕೈಯಿಂದ ಜಾರಿದೆ. ಉರುಳುತ್ತಿದ್ದ ನಾಣ್ಯವನ್ನು ಹಿಡಿಯುವ ಪ್ರಯತ್ನದಲ್ಲಿ ಅದರ ಹಿಂದೆ ಓಡಿದ್ದಾನೆ. ಆದರೆ ಆಯತಪ್ಪಿ ಬಾವಿಗೆ ಬಿದ್ದಿದ್ದಾನೆ. ತಲೆಗೆ ಮಾರಣಾಂತಿಕ ಗಾಯವಾಗಿದೆ. ಅವರ ಮನೆಯ ಸಮೀಪವೇ ಬಾವಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ಹಾ ರೈತ ಮಧೋಲಾಲ್ ಕುಶ್ವಾಹಾ ಅವರ ಏಕೈಕ ಪುತ್ರ. ಮಧೋಲಾಲ್ ಅವರ ಮೊದಲ ಪತ್ನಿಯಿಂದ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಕನ್ಹಾ ಅವರ ಎರಡನೇ ಪತ್ನಿಯಿಂದ ಅವರ ಏಕೈಕ ಪುತ್ರನಾಗಿದ್ದಾನೆ.

ಎಎಸ್ಪಿ ಮಾನ್ಸಿಂಗ್ ಠಾಕೂರ್ ಅವರ ಪ್ರಕಾರ, ಮಗು ನಾಣ್ಯದೊಂದಿಗೆ ಆಟವಾಡುತ್ತಿತ್ತು, ಅದು ಜಾರಿ ಬಾವಿಯ ಕಡೆಗೆ ಉರುಳಿತು. ಅದನ್ನು ಉಳಿಸುವ ಪ್ರಯತ್ನದಲ್ಲಿ ಕನ್ಹಾ ಬಾವಿಗೆ ಬಿದ್ದು ತಲೆಗೆ ಗಾಯವಾಗಿದೆ. ಇದು ಸಾವಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read