HomeLatest NewsBIG NEWS: ಕೇವಲ 6 ಓವರ್ ಗಳಲ್ಲಿ ಏಳು ವಿಕೆಟ್ ಕಬಳಿಕೆ; ಕಗಿಸೋ ರಬಾಡ ದಾಖಲೆ...

BIG NEWS: ಕೇವಲ 6 ಓವರ್ ಗಳಲ್ಲಿ ಏಳು ವಿಕೆಟ್ ಕಬಳಿಕೆ; ಕಗಿಸೋ ರಬಾಡ ದಾಖಲೆ ನುಚ್ಚುನೂರು

ಸ್ಕಾಟ್ಲೆಂಡ್ ನ ಆರಂಭಿಕ ಬೌಲರ್ ಚಾರ್ಲಿ ಕ್ಯಾಸೆಲ್ ತಮ್ಮ ಮೊದಲ ಪಂದ್ಯದಲ್ಲಿ ಕೇವಲ 5.4 ಓವರ್ ಗಳಲ್ಲೇ ಏಳು ವಿಕೆಟ್ ಕಬಳಿಸುವ ಮೂಲಕ ಸೌತ್ ಆಫ್ರಿಕಾದ ವೇಗಿ ಕಗಿಸೋ ರಬಾಡ ಅವರ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ. ಸೋಮವಾರದಂದು ಐಸಿಸಿ ಮೆನ್ಸ್ ವಿಶ್ವಕಪ್ ಲೀಗ್ ಎರಡನೆ ಪಂದ್ಯದಲ್ಲಿ ಒಮಾನ್ ವಿರುದ್ಧ ಅವರು ಈ ದಾಖಲೆ ಮಾಡಿದ್ದಾರೆ. 5.4 ಓವರ್ ಗಳಲ್ಲಿ ಏಳು ವಿಕೆಟ್ ಪಡೆದ ಅವರು ಕೇವಲ 21 ರನ್ ಗಳನ್ನು ನೀಡಿದ್ದಾರೆ.

ಸ್ಕಾಟ್ಲ್ಯಾಂಡ್ ತಂಡದ ಪರ ಆರಂಭಿಕ ಬೌಲರ್ ಕ್ರಿಸ್ ಸೋಲ್ ವೈಯಕ್ತಿಕ ಕಾರಣಗಳಿಗಾಗಿ ಓಮನ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿದ್ದು ಹೀಗಾಗಿ ಚಾರ್ಲಿ ಕ್ಯಾಸೆಲ್ ಅವರಿಗೆ ಅವಕಾಶ ನೀಡಲಾಗಿತ್ತು. ಇದನ್ನು ಸದುಪಯೋಗಪಡಿಸಿಕೊಂಡ ಅವರು ಈ ದಾಖಲೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular