ಬೆಂಗಳೂರು: ವಾಸ್ತು ಶಾಸ್ತ್ರದ ಪ್ರಕಾರ ಮನೆ ಎನ್ನುವುದು ಕೇವಲ ಇಟ್ಟಿಗೆ-ಮಣ್ಣಿನ ಕಟ್ಟಡವಲ್ಲ, ಅದು ನಮ್ಮ ಜೀವನದ ಶಕ್ತಿ ಕೇಂದ್ರ. ಮನೆಯ ಪ್ರತಿಯೊಂದು ಮೂಲೆಯೂ ನಮ್ಮ ಮೇಲೆ ಧನಾತ್ಮಕ ಅಥವಾ ನಕಾರಾತ್ಮಕ ಪ್ರಭಾವ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ಸ್ನಾನಗೃಹ ಅಥವಾ ಬಾತ್‌ರೂಮ್ (Bathroom) ವಿಷಯಕ್ಕೆ ಬಂದರೆ ವಾಸ್ತು ನಿಯಮಗಳು ಅತ್ಯಂತ ಕಟ್ಟುನಿಟ್ಟಾಗಿವೆ.
ಬಾತ್‌ರೂಮ್‌ನಲ್ಲಿ ಅರಿವಿಲ್ಲದೆ ನಾವು ಮಾಡುವ ಸಣ್ಣ ತಪ್ಪುಗಳು ಮನೆಯಲ್ಲಿ ಅಶಾಂತಿ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಬಾತ್‌ರೂಮ್‌ನಲ್ಲಿ ಯಾವ ವಸ್ತುಗಳನ್ನು ಇಡಬಾರದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್:
1.ಮುರಿದ ಚಪ್ಪಲಿಗಳಿಗೆ ಗುಡ್ ಬೈ ಹೇಳಿ
ಅನೇಕರು ಬಾತ್‌ರೂಮ್‌ನಲ್ಲಿ ಹಳೆಯ ಅಥವಾ ಮುರಿದ ಚಪ್ಪಲಿಗಳನ್ನು ಬಳಸುತ್ತಾರೆ. ವಾಸ್ತು ಪ್ರಕಾರ ಇದು ಅತ್ಯಂತ ಅಶುಭ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವುದಲ್ಲದೆ, ಮನೆಯಲ್ಲಿ ದರಿದ್ರತನಕ್ಕೆ ದಾರಿ ಮಾಡಿಕೊಡುತ್ತದೆ.
2.ಒಡೆದ ಕನ್ನಡಿ ಡೇಂಜರ್
ಬಾತ್‌ರೂಮ್‌ನಲ್ಲಿ ಬಿರುಕು ಬಿಟ್ಟ ಅಥವಾ ಒಡೆದ ಕನ್ನಡಿ ಇಡುವುದು ವಾಸ್ತು ದೋಷಕ್ಕೆ ಪ್ರಮುಖ ಕಾರಣ. ಇದು ಹಣಕಾಸಿನ ಮುಗ್ಗಟ್ಟು ತರುವುದಲ್ಲದೆ, ಮನೆಯ ಸದಸ್ಯರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು. ಇಂತಹ ಕನ್ನಡಿಗಳನ್ನು ತಕ್ಷಣವೇ ಹಟಾವೋ ಮಾಡಿ.
3.ಖಾಲಿ ಬಕೆಟ್ ಇಡಬೇಡಿ
ವಾಸ್ತು ಶಾಸ್ತ್ರದ ನಂಬಿಕೆಯಂತೆ ಬಾತ್‌ರೂಮ್‌ನಲ್ಲಿ ಬಕೆಟ್ ಯಾವಾಗಲೂ ಖಾಲಿ ಇರಬಾರದು. ಸದಾ ನೀರು ತುಂಬಿರುವುದು ಸಮೃದ್ಧಿಯ ಸಂಕೇತ. ಒಂದು ವೇಳೆ ನೀರು ತುಂಬಿಸಿಡಲು ಇಷ್ಟವಿಲ್ಲದಿದ್ದರೆ, ಬಕೆಟ್ ಅನ್ನು ತಲೆಕೆಳಗಾಗಿ (Upside down) ಇಡುವುದು ಉತ್ತಮ.
4.ಲೀಕ್ ಆಗುವ ನಲ್ಲಿ (Leaking Tap)
ನಲ್ಲಿಯಿಂದ ನೀರು ನಿರಂತರವಾಗಿ ತೊಟ್ಟಿಕ್ಕುತ್ತಿದ್ದರೆ ಅದು ಕೇವಲ ನೀರಿನ ಪೋಲಲ್ಲ, ಬದಲಿಗೆ ನಿಮ್ಮ ಹಣ ಪೋಲಾಗುತ್ತಿದೆ ಎಂದರ್ಥ. ಹನಿಯುವ ನೀರು ನಕಾರಾತ್ಮಕ ಶಕ್ತಿಯ ಸಂಕೇತವಾಗಿದ್ದು, ತಕ್ಷಣವೇ ಪ್ಲಂಬರ್ ಕರೆಸಿ ಸರಿಪಡಿಸಿಕೊಳ್ಳಿ.
5.ಒದ್ದೆ ಬಟ್ಟೆಗಳನ್ನು ಬಿಡಬೇಡಿ
ಸ್ನಾನ ಮಾಡಿದ ನಂತರ ಒದ್ದೆಯಾದ ಬಟ್ಟೆಗಳನ್ನು ಅಲ್ಲೇ ಬಿಡುವ ಅಭ್ಯಾಸ ನಿಮಗಿದ್ದರೆ ಎಚ್ಚರ ಇದು ಸೂರ್ಯ ದೋಷಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಬಟ್ಟೆ ಒಗೆದ ತಕ್ಷಣ ಅವುಗಳನ್ನು ಹೊರಗೆ ಒಣಗಿಸಲು ಹಾಕಿ.
6.ಉದುರಿದ ಕೂದಲಿನ ಬಗ್ಗೆ ಇರಲಿ ಗಮನ
ಸ್ನಾನ ಮಾಡುವಾಗ ಉದುರಿದ ಕೂದಲನ್ನು ಚರಂಡಿಯಲ್ಲಿ ಅಥವಾ ನೆಲದ ಮೇಲೆ ಹಾಗೆಯೇ ಬಿಡುವುದು ಬಡತನದ ಸಂಕೇತ. ಇದು ಶನಿ ಮತ್ತು ಮಂಗಳ ದೋಷಕ್ಕೆ ಕಾರಣವಾಗಬಹುದು. ಸ್ನಾನ ಮುಗಿದ ತಕ್ಷಣ ಕೂದಲನ್ನು ಸ್ವಚ್ಛಗೊಳಿಸುವುದು ಅನಿವಾರ್ಯ.
7.ಸಸ್ಯಗಳ ಆಯ್ಕೆಯಲ್ಲಿ ಜಾಗ್ರತೆ
ಬಾತ್‌ರೂಮ್ ಒಳಗೆ ಸಸ್ಯಗಳನ್ನು ಇಡುವುದು ಫ್ಯಾಷನ್ ಆಗಿರಬಹುದು ಆದರೆ ವಾಸ್ತು ಪ್ರಕಾರ ಇದು ಎಲ್ಲರಿಗೂ ಒಳಿತಲ್ಲ. ಸರಿಯಾದ ಸಸ್ಯಗಳನ್ನು ಆಯ್ಕೆ ಮಾಡದಿದ್ದರೆ ನಕಾರಾತ್ಮಕತೆ ಹೆಚ್ಚಬಹುದು. ಹಾಗಾಗಿ ಸಸ್ಯ ಇಡುವ ಮೊದಲು ತಜ್ಞರ ಸಲಹೆ ಪಡೆಯುವುದು ಉತ್ತಮ.

