HomeLatest Newsವಿಜಯ್ ಟಿವಿಕೆ ಸರ್ಕಾರದಲ್ಲಿ 7 ಮಂದಿ ದಲಿತ ಶಾಸಕರಿಗೆ ಸಚಿವ ಸ್ಥಾನ, ಬ್ರಾಹ್ಮಣರಿಗೆ ಸಿಕ್ಕಿದ್ದೆಷ್ಟು?

ವಿಜಯ್ ಟಿವಿಕೆ ಸರ್ಕಾರದಲ್ಲಿ 7 ಮಂದಿ ದಲಿತ ಶಾಸಕರಿಗೆ ಸಚಿವ ಸ್ಥಾನ, ಬ್ರಾಹ್ಮಣರಿಗೆ ಸಿಕ್ಕಿದ್ದೆಷ್ಟು?

ದಳಪತಿ ವಿಜಯ್ ಚುನಾವಣೆಗೂ ಮುನ್ನ ನೀಡಿದ ಹೇಳಿಕೆಗಳಂತೆ ಸಿನಿಮೀಯ ರೀತಿಯಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದ್ದಾಸರೆ. 107 ಸೀಟುಗಳನ್ನು ವಿಜಯ್ ನೇತೃತ್ವದ ಟಿವಿಕೆ ಗೆದ್ದರೆ, ಸರ್ಕಾರ ರಚಿಸಲು ಬೇಕಿದ್ದ 118 ಸೀಟುಗಳಿಗೆ ಕಾಂಗ್ರೆಸ್, ವಿಸಿಕೆ, ಇಂಡಿಯನ್ ಮುಸ್ಲಿಂ ಲೀಗ್ ಹಾಗೂ ಸಿಪಿಐಎಂ ಬೆಂಬಲ ನೀಡಿವೆ.

ಹೀಗೆ ಸಣ್ಣ ಪಕ್ಷಗಳ ಸಹಾಯದಿಂದ ಸರ್ಕಾರ ರಚಿಸಿದ ವಿಜಯ್ ಸದ್ಯ ಸಚಿವ ಸಂಪುಟ ರಚನೆ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಒಟ್ಟು 35 ಸಚಿವ ಸ್ಥಾನಗಳ ಪೈಕಿ 33 ಸ್ಥಾನಗಳಿಗೆ ಈಗಾಗಲೇ ಆಯ್ಕೆ ಕಾರ್ಯ ಪೂರ್ಣಗೊಂಡಿದ್ದು, ಒಂದು ಸ್ಥಾನ ವಿಸಿಕೆ ಹಾಗೂ ಇನ್ನೊಂದು ಸ್ಥಾನವನ್ನು ಇಂಡಿಯನ್ ಮುಸ್ಲಿಂ ಲೀಗ್ ಪಕ್ಷಕ್ಕೆ ಮೀಸಲಿಡಲಾಗಿದೆ.

ಇನ್ನು ಈ ಪೈಕಿ ಏಳು ಮಂದಿ ದಲಿತ ಶಾಸಕರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ವಿಜಯ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಚುನಾವಣೆಗೂ ಮುನ್ನ ಸಾಮಾಜಿಕ ನ್ಯಾಯ ನನ್ನ ಧ್ಯೇಯ ಎಂದಿದ್ದ ವಿಜಯ್ ಅದರಂತೆ ಈಗ ಏಳು ಮಂದಿ ದಲಿತ ಶಾಸಕರಿಗೆ ಸಚಿವ ಸ್ಥಾನದ ಜವಾಬ್ದಾರಿ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಸ್ಟಾಲಿನ್ ನೇತೃತ್ವದ ಡಿಎಂಕೆಯಲ್ಲಿ ನಾಲ್ಕು ಮಂದಿ ದಲಿತ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಇದು ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಅತ್ಯಧಿಕವಾಗಿತ್ತು. ಈ ಸಂಖ್ಯೆಯನ್ನು ಇದೀಗ ವಿಜಯ್ ಟಿವಿಕೆ ಸರ್ಕಾರ ಹಿಂದಿಕ್ಕಿದ್ದು, ವಿಸಿಕೆಯ ಓರ್ವ ಶಾಸಕ ಸಂಪುಟ ಸೇರಿದರೆ ದಲಿತ ಶಾಸಕರ ಸಂಖ್ಯೆ ಎಂಟಕ್ಕೇರಲಿದೆ.

ಅಲ್ಲದೇ ಇಬ್ಬರು ಬ್ರಾಹ್ಮಣ ಶಾಸಕರಿಗೆ ಸಚಿವ ಸ್ಥಾನ ನೀಡಿರುವ ವಿಜಯ್ ನಾಲ್ವರು ಮಹಿಳಾ ಶಾಸಕರಿಗೆ ಸಚಿವೆಯರ ಜವಾಬ್ದಾರಿ ವಹಿಸಿದ್ದಾರೆ.

ಸದ್ಯ ಸಚಿವರಾಗಿರುವ ಒಟ್ಟು ಏಳು ಮಂದಿ ಶಾಸಕರ ಪೈಕಿ ಆರು ಮಂದಿ ಟಿವಿಕೆ ಶಾಸಕರಾದರೆ, ಮತ್ತೊಬ್ಬರು ಕಾಂಗ್ರೆಸ್ ಶಾಸಕರಾಗಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular