ಹುಟ್ಟು ಹಬ್ಬದ ದಿನದಂದು ನಮಗೆ ಯಾರಾದ್ರೂ ಸಪ್ರೈಸ್ ಆಗಿ ಕೇಕ್ ತಂದು ಕಟ್ ಮಾಡಿಸಿದ್ರೆ ಖುಷಿಯಾಗೋದಿಲ್ವಾ ಹೇಳಿ..? ಅದರಲ್ಲೂ ನೀವು ಹಲವಾರು ವರ್ಷಗಳಿಂದ ಹುಟ್ಟು ಹಬ್ಬವನ್ನೇ ಆಚರಿಸಿಕೊಳ್ಳದೇ ಇದ್ದಾಗ ಸಡನ್ ಆಗಿ ಯಾರಾದರೂ ನಮ್ಮ ಬರ್ತಡೇ ಸ್ಪೆಷಲ್ ಆಗಿ ಆಚರಿಸಿದ್ರೆ ಅದಕ್ಕಿಂತ ಸಂತೋಷ ಇನ್ನೊಂದು ಇರೋದಿಲ್ಲ. ಇದೇ ಮಾತಿಗೆ ಉದಾಹರಣೆ ಎಂಬಂತ ಘಟನೆಯೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ರೆಸ್ಟಾರೆಂಟ್ ಸಿಬ್ಬಂದಿ ತಮ್ಮ ಜೊತೆ ಕೆಲಸ ಮಾಡುತ್ತಿದ್ದ 64 ವರ್ಷದ ಸಹೋದ್ಯೋಗಿಯ ಹುಟ್ಟುಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸಿದ್ದಾರೆ. ಈ ವೃದ್ಧ ಹಲವು ವರ್ಷಗಳಿಂದ ತಮ್ಮ ಬರ್ತಡೇಯನ್ನು ಆಚರಿಸಿಕೊಂಡೇ ಇರಲಿಲ್ಲ. ಈ ವಿಚಾರ ರೆಸ್ಟಾರೆಂಟ್ ಸಿಬ್ಬಂದಿಗೂ ತಿಳಿದಿತ್ತು. ಹೀಗಾಗಿ ವೃದ್ಧ ಸಹೋದ್ಯೋಗಿಯ ಜನ್ಮದಿನದಂದು ಸಿಬ್ಬಂದಿ ಕೇಕ್ ತರಿಸಿದ್ದು ಸಂಭ್ರಮದಿಂದ ಬರ್ತಡೇ ಆಚರಿಸಿದ್ದಾರೆ.
ಲಿಯೋ ಎಂಬ 64 ವರ್ಷದ ವೃದ್ಧ ರೆಸ್ಟಾರೆಂಟ್ನಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ಶ್ರಮ ಜೀವಿಯಾಗಿರುವ ಲಿಯೋ 64ನೇ ವರ್ಷದ ಜನ್ಮ ದಿನವನ್ನು ರೆಸ್ಟಾರೆಂಟ್ ಸಿಬ್ಬಂದಿ ಸಂಭ್ರಮದಿಂದ ಆಚರಿಸಿದ್ದಾರೆ. ಕೇಕ್ ತಂದು ಹಾಡುವ ಮೂಲಕ ಜನ್ಮದಿನಾಚರಣೆ ಮಾಡಿದ್ದಾರೆ. ಸಿಬ್ಬಂದಿಯ ಈ ಪ್ರೀತಿ ಕಂಡು ಲಿಯೋ ಭಾವುಕರಾಗಿದ್ದು ವಿಡಿಯೋ ಸಖತ್ ವೈರಲ್ ಆಗಿದೆ.
Aww, Leo was so happy to get a cake for his birthday 🥹 It’s the little things that make life special 💫❤️❤️ #kindnessmatters
(🎥 via: sillymimi313 ) pic.twitter.com/ToVlkUGK4i
— Majically News (@MajicallyNews) July 20, 2023

