50ನೇ ವಿವಾಹ ವಾರ್ಷಿಕೋತ್ಸವವನ್ನು ‘ತಾಜ್ ಮಹಲ್’ ಬಳಿ ಆಚರಿಸಿಕೊಂಡ ಮುದ್ದೇಬಿಹಾಳ ದಂಪತಿ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ 74 ವರ್ಷದ ಮರೆಪ್ಪ ಹಾಗೂ 67 ವರ್ಷದ ಅವರ ಪತ್ನಿ ಶಾಂತಾ ತಳವಾರ ತಮ್ಮ ಐವತ್ತನೇ ವಿವಾಹ ವಾರ್ಷಿಕೋತ್ಸವವನ್ನು ಆಗ್ರಾದ ತಾಜ್ ಮಹಲ್ ಬಳಿ ಆಚರಿಸಿಕೊಂಡಿದ್ದಾರೆ.

ಪ್ರೇಮಸೌಧ ತಾಜ್ ಮಹಲ್ ಬಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಈ ದಂಪತಿ ಬಯಸಿದ್ದು, ಮಕ್ಕಳಾದ ಪರಶುರಾಮ, ಬಸವರಾಜ ಆಗ್ರಾಕ್ಕೆ ಕರೆದೊಯ್ಯುವ ಮೂಲಕ ಇದನ್ನು ನೆರವೇರಿಸಿದ್ದಾರೆ. ಅಲ್ಲದೆ ಆಗ್ರಾದ ಪಂಚತಾರಾ ಹೋಟೆಲ್ ನಲ್ಲಿ ಕೇಕ್ ಕತ್ತರಿಸಿ ದಂಪತಿ ಸಂಭ್ರಮಿಸಿದ್ದಾರೆ.

ದಂಪತಿಗೆ ಆರು ಜನ ಪುತ್ರಿಯರು, ಇಬ್ಬರು ಪುತ್ರರಿದ್ದು, 21 ಜನ ಮೊಮ್ಮಕ್ಕಳು, ಇಬ್ಬರು ಸೊಸೆಯರು ಹಾಗೂ ಇಬ್ಬರು ಮರಿ ಮೊಮ್ಮಕ್ಕಳು ಇದ್ದಾರೆ. ತುಂಬು ಕುಟುಂಬದ ಮರೆಪ್ಪ ಹಾಗೂ ಶಾಂತಾ ದಂಪತಿ ತಾಜ್ ಮಹಲ್ ಬಳಿ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮೂಲಕ ಇದನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read