HomeIndiaSHOCKING NEWS: ತಲೆಗೆ ಪೆನ್ ಚುಚ್ಚಿ 5 ವರ್ಷದ ಮಗು ಸಾವು

SHOCKING NEWS: ತಲೆಗೆ ಪೆನ್ ಚುಚ್ಚಿ 5 ವರ್ಷದ ಮಗು ಸಾವು

ಹೈದರಾಬಾದ್: ತಲೆಗೆ ಪೆನ್ ಚುಚ್ಚಿ 5 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ತೆಲಂಗಾಣದ ಭದ್ರಾದ್ರಿ ಕೊತ್ತಗುಡ್ಡಂ ಜಿಲ್ಲೆಯ ಭದ್ರಾಚಲಂನಲ್ಲಿ ಈ ದುರಂತ ಸಂಭವಿಸಿದೆ. 5 ವರ್ಷದ ರಿಯಂಶಿಕಾ ಎಂಬ ಯುಕೆಜಿ ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಬಂದ ಬಳಿಕ ಹೋಂ ವರ್ಕ್ ಮಾಡಲೆಂದು ಮಂಚದ ಮೇಲೆ ಕುಳಿತಿದ್ದಳು. ಹೋಂ ವರ್ಕ್ ಮಾಡುತ್ತಿದ್ದ ರಿಯಂಶಿಕಾ ಏಕಾಏಕಿ ಮಂಚದಿಂದ ಕೆಳಗೆ ಬಿದ್ದಿದ್ದಾಳೆ. ಕೈಯಲ್ಲಿದ್ದ ಪೆನ್ ತಲೆಗೆ ಚುಚ್ಚಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಸರ್ಜರಿಯನ್ನೂ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯದೇ ಬಾಲಕಿ ಸಾವನ್ನಪ್ಪಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular