HomeLatest Newsಐಪಿಎಲ್ ಮ್ಯಾಚ್‌ ನಡುವೆಯೇ ಫುಡ್ ಡೆಲಿವರಿ; ಅಪಾರ್ಟ್ಮೆಂಟ್‌ ಒಂದರ ಫೋಟೋ ವೈರಲ್

ಐಪಿಎಲ್ ಮ್ಯಾಚ್‌ ನಡುವೆಯೇ ಫುಡ್ ಡೆಲಿವರಿ; ಅಪಾರ್ಟ್ಮೆಂಟ್‌ ಒಂದರ ಫೋಟೋ ವೈರಲ್

ಕ್ರಿಕೆಟ್ ಜಗತ್ತಿನ ದಿಗ್ಗಜರೆಲ್ಲರೂ ಐಪಿಎಲ್‌ನಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿರುವ ಈ ಸಮಯದಲ್ಲಿ ದೇಶವಾಸಿಗಳಲ್ಲಿ ಕ್ರಿಕೆಟ್ ಜ್ವರ ವಿಪರೀತವಾಗಿಬಿಟ್ಟಿದೆ. ಅದೆಷ್ಟೇ ಅವಸರದ ಕೆಲಸವಿದ್ದರೂ ಸಹ ಮೊಬೈಲ್/ಟಿವಿ ಪರದೆ ಮೇಲೆ ಸ್ಕೋರ್‌ ಆದರೂ ನೋಡಬೇಕೆನ್ನುವ ಕಾತರ ಕ್ರಿಕೆಟ್ ಅಭಿಮಾನಿಗಳದ್ದು.

ಎಲಿವೇಟರ್‌ ಒಂದರಲ್ಲಿ ಸ್ವಿಗ್ಗಿ ಡೆಲಿವರಿ ಸಿಬ್ಬಂದಿ ಆಹಾರದ ಪೊಟ್ಟಣಗಳನ್ನು ಹಿಡಿದು ನಿಂತಿರುವ ಚಿತ್ರವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನ ಕಂಡ ಟ್ವಿಟರ್‌ ಬಳಕೆದಾರರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದಾರೆ. ತಂತಮ್ಮ ಆರ್ಡರ್‌ಗಳನ್ನು ಆಯಾಯಾ ಮಹಡಿಗಳಿಗೆ ತಲುಪಿಸಲು ಹೊರಟು ನಿಂತಿದ್ದಾರೆ ಈ ಡೆಲಿವರಿ ಏಜೆಂಟರ್‌ಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಐಪಿಎಲ್ ಮ್ಯಾಚ್ ಅದೆಷ್ಟು ಆಸಕ್ತಿಕರವಾಗಿದೆ ಎಂಬುದು ಕಟ್ಟಡದಲ್ಲಿರುವ ಸ್ವಿಗ್ಗಿ ಹುಡುಗರು ಸಂಖ್ಯೆಗೆ ಅನುಗುಣವಾಗಿದೆ,” ಎಂದು ಶುಭ್ ಹೆಸರಿನ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

“ಬಹುಶಃ ಮಧ್ಯದಲ್ಲಿರುವ ಹುಡುಗ ಸ್ಕೋರ್‌ ಚೆಕ್ ಮಾಡುತ್ತಿರಬಹುದು,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular