HomeKarnataka‘ಹಸಿರು ಹಾಸನ’ ಯೋಜನೆ: 5 ಲಕ್ಷ ಗಿಡ ಬೆಳಸಲು ಸಂಕಲ್ಪ

‘ಹಸಿರು ಹಾಸನ’ ಯೋಜನೆ: 5 ಲಕ್ಷ ಗಿಡ ಬೆಳಸಲು ಸಂಕಲ್ಪ

“ಹಸಿರು ಹಾಸನ ಸಂಕಲ್ಪದೊಂದಿಗೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗಗಳು, ಕಚೇರಿಗಳ ಆವರಣದಲ್ಲಿ 5 ಲಕ್ಷ ಗಿಡಗಳನ್ನು ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಿ” ಎಂದು ಅಧಿಕಾರಿಗಳಿಗೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ಹಾಗೂ ತೆರಿಗೆಗಳ ವಸೂಲಾತಿ ಹಾಗೂ ಎ.ಬಿ.ಸಿ ನಿಯಮ ಅನುಷ್ಠಾನದಲ್ಲಿ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆ ಹಾಗೂ ಹಸಿರು ಹಾಸನ 2026ರ ನಿರ್ಮಾಣ ಕುರಿತು ಸಭೆ ನಡೆಸಿದರು.

“ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಕಚೇರಿಗಳು, ಸರ್ಕಾರಿ ಜಮೀನು ಹಾಗೂ ಶಾಲೆಗಳು ಆವರಣಗಳಿಗೆ ಸುಮಾರು 5 ಲಕ್ಷ ಹಣ್ಣಿನ ಹಾಗೂ ಇತರೆ ಗಿಡಗಳನ್ನು ನೆಟ್ಟು ಬೆಳಸಲು ಕ್ರಿಯಾಯೋಜನೆ ಹಾಗೂ ಜಾಗಗಳು ಗುರುತಿಸಲು” ನಿರ್ದೇಶನ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಒಂದು ಗಿಡ ಬೆಳೆಸಿ ಮರವನ್ನಾಗಿಸಿದ್ದರೆ ನೂರಾರು ಪಕ್ಷಿಗಳಿಗೆ ಆಶ್ರಯ ತಾಣವಾಗುತ್ತದೆ, ಪ್ರಾಣಿಗಳಿಗೆ ನೆರಳಾಗುತ್ತದೆ. ಆಮ್ಲಜನಕ ಸಿಗುತ್ತದೆ ಹಾಗೂ ಹಣ್ಣಿನ ಮರವಾದರೆ ಹಣ್ಣು ಸಿಗುತ್ತದೆ, ಆದ್ದರಿಂದ ಗಿಡಗಳನ್ನು ನೆಟ್ಟು ಬೆಳಸಬೇಕು” ಎಂದರು.

“ಜಿಲ್ಲೆಯಲ್ಲಿರುವ ಪ್ರತಿ ಗ್ರಾಮ ಪಂಚಾಯಿತಿಗಳಿಗೆ 2000 ಗಿಡಗಳನ್ನು ನಿಗದಿ ಪಡಿಸುವಂತೆ ಹಾಗೂ ಮಹಾನಗರ ಪಾಲಿಕೆ, ನಗರ ಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರ ರಸ್ತೆಗಳ ಬದಿಯಲ್ಲಿ ಗಿಡಗಳನ್ನು ಹೆಚ್ಚಾಗಿ ಬೆಳಸಬೇಕು, ಹಸಿರು ಹಾಸನ ಜಿಲ್ಲೆಯ ನಿರ್ಮಾಣಕ್ಕೆ ಎಲ್ಲಾ ಅಧಿಕಾರಿಗಳು ಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.

“ಸಭೆ ಸಮಾರಂಭಗಳಲ್ಲಿ ಹೂವಿನ ಹಾರ ಬೊಕ್ಕೆ ಶಾಲು ನೀಡುವ ಬದಲಾಗಿ ಹಣ್ಣಿನ ಗಿಡ ಸೇರಿದಂತೆ ಇತರೆ ಯಾವುದೇ ಗಿಡವನ್ನು ನೀಡುವುದರಿಂದ ಗಿಡ ಮರಗಳನ್ನು ಬೆಳೆಸಿದಂತಾಗುತ್ತದೆ” ಎಂದು ತಿಳಿಸಿದರು.

“ಹಾಸ್ಟೆಲ್‌ಗಳು ಆವರಣದಲ್ಲಿ, ವಸತಿ ಶಾಲೆಗಳ ಆವರಣದಲ್ಲಿ ಹಾಗೂ ಸರ್ಕಾರಿ ಗೋಮಾಳ,ಕೆರೆಗಳ ಸುತ್ತ ಚಿಕ್ಕ ಉದ್ಯಾನವನ ಗಿಡಗಳನ್ನು ನೆಡುವ ಕೆಲಸವಾಗಬೇಕು” ಎಂದು ಹೇಳಿದರು.

“ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಸುಪ್ರೀಂಕೋರ್ಟ್ ಆದೇಶದಂತೆ ಹಾಗೂ ಸರ್ಕಾರದ ಕಾರ್ಯದರ್ಶಿಯವರ ನಿರ್ದೇಶನ ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳಿಗೆ ಪಾಲಿಸಬೇಕು. ಕಚೇರಿ, ಖಾಸಗಿ ಸಂಸ್ಥೆಗಳ ಆವರಣದಲ್ಲಿ ಬೀದಿ ನಾಯಿಗಳು ಇಲ್ಲದಂತೆ ನೋಡಿಕೊಳ್ಳುವುದು ಕಚೇರಿ ಸಂಸ್ಥೆಗಳ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ, ಕಾಂಪೌಂಡ್ ನಿರ್ಮಾಣ ಮಾಡಿಕೊಂಡು ನಾಯಿಗಳು ವಾಸವಿರದಂತೆ ನೋಡಿಕೊಳ್ಳಬೇಕು” ಎಂದು ತಿಳಿಸಿದರು.

“ರಸ್ತೆಗಳು, ಪುಟ್ ಪಾತ್‌ಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಜಾನುವಾರುಗಳನ್ನು ರಸ್ತೆಗೆ ಬಿಡುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ” ಎಂದರು.

“ರಸ್ತೆಗಳಿಗೆ ಜಾನುವಾರುಗಳನ್ನು ಬಿಡುವುದನ್ನು ತಡೆಯಬೇಕು, ಮಾಲೀಕರಿಲ್ಲದ ಜಾನುವಾರುಗಳನ್ನು ಗೋಶಾಲೆಗೆ ಸ್ಥಳಾಂತರಿಸಬೇಕು. ಜಾನುವಾರುಗಳನ್ನು ರಸ್ತೆಗಳಿಗೆ ಬಿಡುವ ಮಾಲೀಕರಿಗೆ ನೋಟಿಸ್ ನೀಡಬೇಕು” ಎಂದು ತಿಳಿಸಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular