HomeIndiaBREAKING: ವಾರಣಾಸಿಯ ಗಂಗಾ ನದಿ ದೋಣಿಯಲ್ಲಿ ಚಿಕನ್, ಬಿಯರ್ ಸಹಿತ ಪಾರ್ಟಿ ಮಾಡಿದ 5 ಜನ...

BREAKING: ವಾರಣಾಸಿಯ ಗಂಗಾ ನದಿ ದೋಣಿಯಲ್ಲಿ ಚಿಕನ್, ಬಿಯರ್ ಸಹಿತ ಪಾರ್ಟಿ ಮಾಡಿದ 5 ಜನ ಅರೆಸ್ಟ್

ವಾರಣಾಸಿ(ಉತ್ತರ ಪ್ರದೇಶ): ವಾರಣಾಸಿಯ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ ಚಿಕನ್ ಬೇಯಿಸಿ ಬಿಯರ್ ಸೇವಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಐದು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ದಶಾಸ್ವಮೇಧ ಎಸಿಪಿ ಅತುಲ್ ಅಂಜನ್ ತ್ರಿಪಾಠಿ ಅವರು ಮಾಹಿತಿ ನೀಡಿ, ತನಿಖೆಯ ನಂತರ, ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ ಬಂಧಿಸಲಾಗಿದ್ದು, ಅವರನ್ನು ಜೈಲಿಗೆ ಕಳುಹಿಸಲಾಗಿದೆ ಮತ್ತು ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬಂಧಿತರನ್ನು ದೀಪಕ್ ಕುಮಾರ್, ಅಜಯ್ ಸಾಹ್ನಿ, ಅರುಣ್ ಕುಮಾರ್ ಸಾಹ್ನಿ, ಅನುರಾಗ್ ನಿಶಾದ್ ಮತ್ತು ರಾಹುಲ್ ಸಾಹ್ನಿ ಎಂದು ಗುರುತಿಸಲಾಗಿದೆ. ಎಲ್ಲರೂ 25 ರಿಂದ 32 ವರ್ಷ ವಯಸ್ಸಿನವರು. ಇವರು ವಾರಣಾಸಿಯ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ ಕೋಳಿ ಬೇಯಿಸಿ ಬಿಯರ್ ಸೇವಿಸಿದ್ದಾರೆ. ತನಿಖೆಯ ನಂತರ ಆರೋಪಿತರನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular