HomeInternationalತಾರುಣ್ಯಕ್ಕಾಗಿ ಈ ವ್ಯಕ್ತಿ ಖರ್ಚು ಮಾಡ್ತಿರುವ ಹಣ ಎಷ್ಟು ಗೊತ್ತಾ..?

ತಾರುಣ್ಯಕ್ಕಾಗಿ ಈ ವ್ಯಕ್ತಿ ಖರ್ಚು ಮಾಡ್ತಿರುವ ಹಣ ಎಷ್ಟು ಗೊತ್ತಾ..?

ಕ್ಯಾಲಿಫೋರ್ನಿಯಾ: ವಯಸ್ಸು ಹೆಚ್ಚಾದಂತೆ ಮುಪ್ಪು ಬರೋದು ಕಾಮನ್. ಅನೇಕರು ನಾವು ಯಂಗ್ ಆಗಿ ಕಾಣಬೇಕು ಅಂತ ಅಂದುಕೊಳ್ತಾರೆ. ಆದರೆ ವಯಸ್ಸನ್ನು ತಡೆಹಿಡಿಯಲು ಸಾಧ್ಯವಾ..? ಇಲ್ಲೊಬ್ಬ ವ್ಯಕ್ತಿ ತಾನು ಹುಡುಗನಂತೆ ಕಾಣಬೇಕು ಅಂತ ವೈದ್ಯಲೋಕದ ಮೊರೆ ಹೋಗಿದ್ದಾರೆ. ಇದಕ್ಕಾಗಿ ಆತ ಸುಮಾರು 16 ಕೋಟಿ ಖರ್ಚು ಮಾಡಿದ್ದಾರಂತೆ.

ಹೌದು, 45 ವರ್ಷ ವಯಸ್ಸಿನ ಬ್ರಿಯಾನ್‌ ಜಾನ್ಸನ್‌ ಎಂಬ ಅಮೆರಿಕದ ಉದ್ಯಮಿ 18 ವರ್ಷದವರಂತೆ ಕಾಣಲು ವೈದ್ಯರ ಮೊರೆ ಹೋಗಿದ್ದಾರೆ. ದುಬಾರಿ ಟ್ರೀಟ್ಮೆಂಟ್ ಒಂದನ್ನು ತೆಗದುಕೊಂಡಿರುವ ಇವರು ವರ್ಷಕ್ಕೆ ಬರೋಬ್ಬರಿ 16 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರಂತೆ. ರೀಜನರೇಟಿವ್‌ ಮೆಡಿಸಿನ್‌ ಮೂಲಕ ಈ ಉದ್ಯಮಿ ಜಾನ್ಸನ್‌ ಅವರ ದೇಹದ ಎಲ್ಲ ಅವಯವಗಳ ವಯಸ್ಸನ್ನು ರಿವರ್ಸ್‌ ಮಾಡಲು 29 ವರ್ಷದ ವೈದ್ಯ ಒಲಿವರ್‌ ಜೋಲ್‌ಮನ್‌ ಅವರ ತಂಡ ಅವಿರತ ಶ್ರಮಿಸುತ್ತಿದೆಯಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

30 ವೈದ್ಯರು ಮತ್ತು ಆರೋಗ್ಯ ತಜ್ಞರು ನಿತ್ಯ ಇವರಿಗೆ ಚಿಕಿತ್ಸೆ ನೀಡುತ್ತಿದ್ದಾರಂತೆ. ಅಷ್ಟೆ ಅಲ್ಲ ಜಾನ್ಸನ್‌ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ವರದಿಯ ಪ್ರಕಾರ, ಜಾನ್ಸನ್ ಅವರ ಹೃದಯವು 37 ವರ್ಷದ ವಯಸ್ಸಿನವರ ಹಂತಕ್ಕೆ ಮರಳಿದೆಯಂತೆ. ಅವರ ತ್ವಚೆಯು 28 ವರ್ಷದ ವ್ಯಕ್ತಿಯ ತ್ವಚೆಯಂತೆ ಬದಲಾಗಿದೆಯಂತೆ. ಈ ಮೂಲಕ ಅವರನ್ನು 18 ವಯಸ್ಸಿಗೆ ಇಳಿಸುವ ಪ್ರಯತ್ನ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular