HomeKarnatakaಬರೋಬ್ಬರಿ 38 ಕೆಜಿ ತೂಕದ ಮೀನು ಬಲೆಗೆ; 5,700 ರೂ. ಗಳಿಗೆ ಮಾರಾಟ....!

ಬರೋಬ್ಬರಿ 38 ಕೆಜಿ ತೂಕದ ಮೀನು ಬಲೆಗೆ; 5,700 ರೂ. ಗಳಿಗೆ ಮಾರಾಟ….!

ವಿಜಯಪುರ ಜಿಲ್ಲೆಯ ಮೀನುಗಾರರೊಬ್ಬರ ಬಲೆಗೆ ಬರೋಬ್ಬರಿ 38 ಕೆಜಿ ತೂಕದ ಕಾಟ್ಲಾ ಜಾತಿಗೆ ಸೇರಿದ ಮೀನು ಬಲೆಗೆ ಬಿದ್ದಿದ್ದು ಇದನ್ನು 5,700 ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ.

ಕೃಷ್ಣಾ ನದಿಯ ಹಳೆ ಚಿಮ್ಮಲಗಿ ಬಳಿಯ ಬಾವಾಸಾಬ್ ಗುಡ್ಡದ ಬಳಿ ಗುರುವಾರದಂದು ಮೀನುಗಾರ ಭರತ ಯಮನೂರಿ ಸಾಳೆ ಹಾಕಿದ್ದ ಬಲೆಗೆ ಈ ಮೀನು ಬಿದ್ದಿದ್ದು, ಸಗಟು ವ್ಯಾಪಾರಿ ಮಹಾಂತೇಶ ಈ ಮೀನನ್ನು ಖರೀದಿಸಿದ್ದಾರೆ.

ಕಳೆದ ವಾರ ಇನ್ನೊಬ್ಬ ಮೀನುಗಾರನಿಗೆ 35 ಕೆಜಿ ತೂಕದ ಮೀನು ಸಿಕ್ಕಿತ್ತು ಎನ್ನಲಾಗಿದ್ದು, ಕೃಷ್ಣ ನದಿಯ ಹಿನ್ನಿರು ಕಡಿಮೆಯಾಗಿರುವ ಕಾರಣ ಆಳದ ನೀರಿನಲ್ಲಿ ಬೃಹತ್ ಗಾತ್ರದ ಮೀನುಗಳು ಬಲೆಗೆ ಬೀಳುತ್ತಿವೆ. ಹೀಗಾಗಿ ಮೀನುಗಾರರು ದೊಡ್ಡ ಗಾತ್ರದ ಮೀನುಗಳನ್ನು ಹಿಡಿಯಲು ಅಗಲದ ಬಲೆಯನ್ನು ಬಳಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular