HomeKarnatakaBREAKING: ಆರುಂಡಿ ಶ್ರೀನಿವಾಸ್ ಸೇರಿ 30 ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

BREAKING: ಆರುಂಡಿ ಶ್ರೀನಿವಾಸ್ ಸೇರಿ 30 ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದೆ. ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನು ಮಂಗಳೂರು ವಾರ್ತಾ ಭಾರತೀಯ ಅಬ್ಬು ಸಲಾಂ ಪುತ್ತಿಗೆ ಅವರಿಗೆ ನೀಡಲಾಗಿದೆ.

ಶಿವಮೊಗ್ಗದ ಪತ್ರಕರ್ತ ಹಾಗೂ ಲೇಖಕ ಆರುಂಡಿ ಶ್ರೀನಿವಾಸ ಮೂರ್ತಿ, ಪ್ರೊ. ಎ.ಎಸ್. ಬಾಲಸುಬ್ರಮಣ್ಯಂ, ರಿಷಿಕೇಶ್ ಬಹದ್ದೂರ್ ದೇಸಾಯಿ, ಸುಭಾಷ್ ಹೂಗಾರ್, ಟಿ. ಗುರುರಾಜ್, ಕುಮಾರನಾಥ ಯು.ಕೆ., ಸಿದ್ದು ಕಾಲೋಜಿ, ನಿರೂಪಮಾ ಸೇರಿದಂತೆ 30 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ.

ಅಭಿಮಾನಿ ದತ್ತಿ ಪ್ರಶಸ್ತಿಗೆ ಕೆ. ಓಂಕಾರ ಮೂರ್ತಿ, ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಬಿ.ಕೆ. ದೇವಯ್ಯ, ನಂದೀಶ್ ಮಲ್ಲೇನಹಳ್ಳಿ, ಅಭಿಮನ್ಯು ಪ್ರಶಸ್ತಿಗೆ ಪ್ರಭು ಬ. ಅಡವಿಹಾಳ, ಪ್ರಜಾ ಸಂದೇಶ ದತ್ತಿ ಪ್ರಶಸ್ತಿಗೆ ಮೊಹಮ್ಮದ್ ಅಖಿಲ್ ಉಡೆವು ಅವರನ್ನು ಆಯ್ಕೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಹಮತ್ ತರಿಕೆರೆ ಅವರಿಗೆ ಡಾ. ಬಿ.ಆರ್. ಅಂಬೇಡ್ಕರ್ ಮೂಕ ನಾಯಕ ಪ್ರಶಸ್ತಿ, ಮ್ಯುರಿಯಲ್ ನಿರ್ಮಲ ಡಿಸಿಲ್ವ  ಅವರಿಗೆ ಮಾಧ್ಯಮ ಮಹಾ ಸಾಧಕ ಸಿ.ವಿ. ರಾಜಗೋಪಾಲ್ ದತ್ತಿ ಪ್ರಶಸ್ತಿ, ಹೆಚ್.ಎಸ್. ಸುಧೀಂದ್ರ ಕುಮಾರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿ, ಹೊಸಪೇಟೆ ಟೈಮ್ಸ್ ಪತ್ರಿಕೆಗೆ ಆಂದೋಲನ ಪ್ರಶಸ್ತಿ ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular