HomeKarnatakaBIG NEWS: ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕಾಮುಕನಿಗೆ ಗಲ್ಲುಶಿಕ್ಷೆ ವಿಧಿಸಿದ ಬೆಳಗಾವಿ ಪೊಕ್ಸೋ...

BIG NEWS: ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕಾಮುಕನಿಗೆ ಗಲ್ಲುಶಿಕ್ಷೆ ವಿಧಿಸಿದ ಬೆಳಗಾವಿ ಪೊಕ್ಸೋ ಕೋರ್ಟ್

ಬೆಳಗಾವಿ: ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾಮುಕನಿಗೆ ಗಲ್ಲುಶಿಕ್ಷೆ ವಿಧಿಸಿ ಬೆಳಗವೈ ಪೋಕ್ಸೋ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಆರೋಪಿ ಉದ್ದಪ್ಪ ರಾಮಣ್ಣ ಗಾಣಿಗೇರ (32) ಗಲ್ಲುಶಿಕ್ಷೆಗೆ ಗುರಿಯಾದವನು. 2017ರಲ್ಲಿ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ವರ್ಷದ ಬಾಲಕಿ ಮೇಲೆ ಕಾಮುಕ ಅತ್ಯಾಚಾರವೆಸಗಿದ್ದ.

ಮನೆಮುಂದೆ ಆಟವಾಡುತ್ತಿದ್ದ ಬಾಲಕಿಗೆ ಚಾಕೋಲೇಟ್ ಕೊಡಿಸಿ ಆಕೆಯನ್ನು ಎತ್ತೊಯ್ದಿದ್ದ ಆರೋಪಿ, ಕಬ್ಬಿನಗದ್ದೆಗೆ ಕರೆದೊಯ್ದು ನೀಚಕೃತ್ಯವೆಸಗಿದ್ದ. ಅತ್ಯಾಚಾರದ ಬಳಿಕ ಬಾಲಕಿಯನ್ನು ಕೊಲೆಗೈದು ಮಗುವಿನ ಕಣ್ಣು, ಮೂಗಿಗೆ ಮಣ್ಣು ಹಾಕಿದ್ದ. ಸದ್ಯ ಆರೋಪಿ ಕೃತ್ಯ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗೆ ನ್ಯಾಯಾಲಯ ಗಲ್ಲು ಗಲ್ಲುಶಿಕ್ಷೆ ವಿಧಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular