HomeKarnatakaಬಸ್ ಇಳಿದು ತಪ್ಪಿಸಿಕೊಂಡಿದ್ದ 3 ವರ್ಷದ ಮಗು ಪತ್ತೆ; ಮರಳಿ ಪೋಷಕರ ಮಡಿಲಿಗೆ

ಬಸ್ ಇಳಿದು ತಪ್ಪಿಸಿಕೊಂಡಿದ್ದ 3 ವರ್ಷದ ಮಗು ಪತ್ತೆ; ಮರಳಿ ಪೋಷಕರ ಮಡಿಲಿಗೆ

ಚಿಕ್ಕಮಗಳೂರು: ಬಸ್ ಇಳಿದು ತಪ್ಪಿಸಿಕೊಂಡಿದ್ದ ಮೂರು ವರ್ಷದ ಮಗು ಪತ್ತೆಯಾಗಿದ್ದು, ಪೋಷಕರ ಮಡಿಲು ಸೇರಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ತರೀಕೆರೆ ತಾಲೂಕಿನ ತಣಿಗೇಬೈಲು ಗ್ರಾಮದ ನಿವಾಸಿ ಅಜ್ಜ ತನ್ನ ಮೊಮ್ಮಗು ಮೂರು ವರ್ಷದ ಶ್ರೇಯಸ್ ಜೊತೆ ಖಾಸಗಿ ಬಸ್ ನಲ್ಲಿ ತರೀಕೆರೆಗೆ ತೆರಳುತ್ತಿದ್ದರು. ಬಸ್ ನಲ್ಲಿ ಅಜ್ಜ ನಿದ್ದೆಗೆ ಜಾರಿದ್ದಾರೆ. ಬಸ್ ಲಿಂಗದಹಳ್ಳಿ ನಿಲ್ದಾಣದ ಬಳಿ ನಿಲ್ಲುತ್ತಿದ್ದಂತೆ ಬಾಲಕ ಶ್ರೇಯಸ್ ಬಸ್ ನಿಂದ ಇಳಿದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಬಸ್ ಇಳಿದ ಬಾಲಕ ತನ್ನ ಬಸ್ ಬಿಟ್ಟು ತರಿಕೆರೆಗೆ ಹೊರಡುತ್ತಿದ್ದ ಮತ್ತೊಂದು ಬಸ್ ಹತ್ತಿದ್ದಾನೆ. ಆದರೆ ಬಸ್ ನಲ್ಲಿ ಅಜ್ಜ ಕಾಣದೆ ಅಳಲು ಆರಂಭಿಸಿದ್ದಾನೆ. ಪ್ರಯಾಣಿಕರು ಮಗುವನ್ನು ವಿಚಾರಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಇದೇ ವೇಳೆ ಪ್ರಯಾಣಿಕರು ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮಗು ತಪ್ಪಿಸಿಕೊಂಡಿದ್ದಾಗಿ ಪ್ರಕಟಿಸಿದ್ದಾರೆ. ಇದನ್ನು ಕಂಡ ಪೋಷಕರು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಸದ್ಯ ಬಸ್ ಇಳಿದು ತಪ್ಪಿಸಿಕೊಂಡಿದ್ದ ಮಗು ಸಾರ್ವಜನಿಕರು, ಪ್ರಯಾಣಿಕರ ನೆರವಿನಿಂದ ಮರಳಿ ಪೋಷಕರ ಮಡಿಲು ಸೇರಿದೆ.

For Latest News Updates, Join Our Whatsapp Community🚩
RELATED ARTICLES

Most Popular