HomeIndiaBREAKING : ಅರುಣಾಚಲ ಪ್ರದೇಶದಲ್ಲಿ ಟ್ರಕ್ ಕಂದಕಕ್ಕೆ ಉರುಳಿ ಮೂವರು ಯೋಧರು ಹುತಾತ್ಮ..!

BREAKING : ಅರುಣಾಚಲ ಪ್ರದೇಶದಲ್ಲಿ ಟ್ರಕ್ ಕಂದಕಕ್ಕೆ ಉರುಳಿ ಮೂವರು ಯೋಧರು ಹುತಾತ್ಮ..!

ಇಟಾನಗರ: ಸೇನಾ ಟ್ರಕ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಯೋಧರು ಸಾವನ್ನಪ್ಪಿರುವ ಘಟನೆ ಅರುಣಾಚಲ ಪ್ರದೇಶದ ಸುಬಾನ್ಸಿರಿ ಜಿಲ್ಲೆಯಲ್ಲಿ ನಡೆದಿದೆ.

ಅರುಣಾಚಲ ಪ್ರದೇಶದ ದಪೋರಿಜೋದಿಂದ ಲೆಪರಾಡ ಜಿಲ್ಲೆಯ ಬಸರ್ ಗೆ ಸೇನಾ ಟ್ರಕ್ ಸಾಗುತ್ತಿತ್ತು. ಈ ವೇಳೆ ತಾಪಿ ಗ್ರಾಮದ ಅರುಣಾಚಲ ಪ್ರದೇಶ ಹೆದ್ದಾರಿಯಲ್ಲಿ ದುರಂತಕ್ಕೀಡಾದ ಟ್ರಕ್ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂವರು ಯೋಧರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಮೃತರನ್ನು ಹವಾಲ್ದಾರ್ ಮಖತ್ ಸಿಂಗ್, ನಾಯ್ಕ್ ಮುಖೇಶ್ ಕುಮಾರ್, ಗ್ರೆನೇಡಿಯರ್ ಆಸಿಶ್ ಕುಮಾರ್ ಎಂದು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಪಘಾತದಲ್ಲಿ ಮೂವರು ಯೋಧರು ಸಾವನ್ನಪ್ಪಿರುವ ಘಟನೆ ಬಗ್ಗೆ ಮುಖ್ಯಮಂತ್ರಿ ಪೇಮಾ ಖಂಡು ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಘಟನೆ ಅತ್ಯಂತ ದು:ಖತಂದಿದೆ. ರಾಷ್ಟ್ರಕ್ಕಾಗಿ ಅವರ ತ್ಯಾಗ ಹಾಗೂ ಸೇವೆಯನ್ನು ಸರ್ಕಾರ ಗೌರವಿಸುತ್ತದೆ ಎಂದು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular