HomeKarnatakaಬರೋಬ್ಬರಿ 3.50 ಲಕ್ಷ ರೂಪಾಯಿಗಳಿಗೆ ಮಾರಾಟವಾದ 'ಹಣಿಮ್ಯಾ'

ಬರೋಬ್ಬರಿ 3.50 ಲಕ್ಷ ರೂಪಾಯಿಗಳಿಗೆ ಮಾರಾಟವಾದ ‘ಹಣಿಮ್ಯಾ’

3.5 ಲಕ್ಷ ರೂ. ಬೆಲೆಗೆ ಎತ್ತು ಮಾರಾಟ –

ರೈತ ಮಹಿಳೆಯೊಬ್ಬರು ಸಾಕಿದ್ದ ‘ಹಣಿಮ್ಯಾ’ಎಂಬ ಹೆಸರಿನ ಎತ್ತು ಬರೋಬ್ಬರಿ 3.50 ಲಕ್ಷಗಳಿಗೆ ಮಾರಾಟವಾಗಿ ದಾಖಲೆ ಬರೆದಿದೆ.

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕು ಬಳೂತಿ ಗ್ರಾಮದ ಮಲ್ಲವ್ವ ಹೆಬ್ಬಿ ಎಂಬವರ ಎತ್ತಿಗೆ ಈ ಬೆಲೆ ಸಿಕ್ಕಿದ್ದು, ಹಲಗಲಿ ಗ್ರಾಮದ ಸಂಗಪ್ಪ ಕಜ್ಜಿಡೋಣಿ ಇದನ್ನು ಖರೀದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಮಲ್ಲವ್ವ ಹೆಬ್ಬಿ ಅವರ ಪುತ್ರ ಪುಂಡಲೀಕ ಹೆಬ್ಬಿ ಬಬಲೇಶ್ವರ ತಾಲೂಕಿನ ತೊನಶ್ಯಾಳ ಗ್ರಾಮದಿಂದ ಒಂದು ವರ್ಷದ ಹೋರಿಯನ್ನು 35,000 ರೂಪಾಯಿಗಳಿಗೆ ಖರೀದಿ ಮಾಡಿದ್ದರು. ಅತ್ಯಂತ ಮುತುವರ್ಜಿಯಿಂದ ಇದನ್ನು ಸಾಕಿದ್ದು, ಎತ್ತಿನ ಬಂಡಿ ಸ್ಪರ್ಧೆಯಲ್ಲಿ ಇದು ಹಲವು ಬಹುಮಾನಗಳನ್ನು ಪಡೆದಿತ್ತು.

For Latest News Updates, Join Our Whatsapp Community🚩
RELATED ARTICLES

Most Popular