HomeEntertainment'ಕಭಿ ಹಾನ್ ಕಭಿ ನಾ'ಗೆ 29 ವರ್ಷ: ಶಾರುಖ್​ ಹಾಡು ಹಂಚಿಕೊಂಡ ಅಭಿಮಾನಿಗಳು

‘ಕಭಿ ಹಾನ್ ಕಭಿ ನಾ’ಗೆ 29 ವರ್ಷ: ಶಾರುಖ್​ ಹಾಡು ಹಂಚಿಕೊಂಡ ಅಭಿಮಾನಿಗಳು

ಶಾರುಖ್ ಖಾನ್ ಅವರ ಕಭಿ ಹಾನ್ ಕಭಿ ನಾ 90ರ ದಶಕದಲ್ಲಿ ಭಾರಿ ಹಿಟ್​ ಆಗಿದ್ದ ಹಾಡು. ಸುಚಿತ್ರಾ ಕೃಷ್ಣಮೂರ್ತಿ, ದೀಪಕ್ ತಿಜೋರಿ ಮತ್ತು ನಾಸಿರುದ್ದೀನ್ ಷಾ ಅವರು ನಟಿಸಿರುವ ಈ ಚಿತ್ರ 29 ವರ್ಷಗಳ ನಂತರವೂ ಸಿನಿಮಾ ಉತ್ಸಾಹಿಗಳ ಹೃದಯಕ್ಕೆ ಹತ್ತಿರವಾಗಿದೆ.

ಶಾರುಖ್ ಖಾನ್ ಅವರ ಅಭಿಮಾನಿಗಳು ರೊಮ್ಯಾಂಟಿಕ್ ಕಾಮಿಡಿಯಲ್ಲಿ ಶಾರುಖ್​ ಅವರ ‘ಸುನಿಲ್’ ಪಾತ್ರವನ್ನು ಬಹಳ ಮೆಚ್ಚಿಕೊಂಡಿದ್ದು, ಹಾಡಿನ ವಿಡಿಯೋ ಪುನಃ ವೈರಲ್​ ಆಗಿದೆ. ಚಿತ್ರಕ್ಕೆ 29 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಭಿ ಹಾನ್ ಕಭಿ ನಾ ಚಿತ್ರದ ತಮ್ಮ ನೆಚ್ಚಿನ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಚಲನಚಿತ್ರವು ಭಾರತದಾದ್ಯಂತ ಥಿಯೇಟರ್‌ನಲ್ಲಿ ಮರು-ಬಿಡುಗಡೆಯಾಗಬೇಕಿದೆ ಎಂದು ಶಾರುಖ್​ ಅಭಿಮಾನಿಗಳು ಆಸೆ ಪಟ್ಟಿದ್ದಾರೆ. ಶಾರುಖ್​ ಅವರ ಅಭಿನಯ ಎಂದಿಗೂ ಶ್ರೇಷ್ಠವೇ ಆಗಿದ್ದು, ಇವರೊಬ್ಬ ಪ್ರಸಿದ್ಧ ತಾರೆ ಎಂದು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular