HomeCrimeಪರೀಕ್ಷೆ ಬರೆದು ವಾಪಸ್ಸಾಗ್ತಿದ್ದ ಯುವತಿ ಮೇಲೆ ಗುಂಡು ಹಾರಿಸಿ ಹತ್ಯೆ

ಪರೀಕ್ಷೆ ಬರೆದು ವಾಪಸ್ಸಾಗ್ತಿದ್ದ ಯುವತಿ ಮೇಲೆ ಗುಂಡು ಹಾರಿಸಿ ಹತ್ಯೆ

ಉತ್ತರಪ್ರದೇಶದಲ್ಲಿ ಅತೀಕ್ ಅಹ್ಮದ್ ಹತ್ಯೆ ಬೆನ್ನಲ್ಲೇ ಕ್ರೈಂ ಪ್ರಕರಣಗಳು ವರದಿಯಾಗುತ್ತಿವೆ. ಸೋಮವಾರ ಜಲೌನ್ ಜಿಲ್ಲೆಯಲ್ಲಿ ಕಾಲೇಜು ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ 20 ವರ್ಷದ ಯುವತಿಯನ್ನ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರೋಶ್ನಿ ಅಹಿರ್ವಾರ್ ಎಂಬ ಯುವತಿ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ವಿದ್ಯಾರ್ಥಿನಿ. ಆಕೆ ತನ್ನ ಕಾಲೇಜಿನಲ್ಲಿ ಪರೀಕ್ಷೆ ಬರೆದು ಮನೆಗೆ ಹಿಂದಿರುಗುತ್ತಿದ್ದಾಗ ಆಕೆಯ ಮೇಲೆ ದಾಳಿ ನಡೆದಿದೆ ಎಂದು ಆಕೆಯ ತಂದೆ ಮಾನ್ ಸಿಂಗ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಂಟ್ರಿಮೇಡ್ ಪಿಸ್ತೂಲ್ ನಿಂದ ಆಕೆಯ ತಲೆಗೆ ಗುಂಡು ಹಾರಿಸಿದ ದುಷ್ಕರ್ಮಿಗಳು ಆಯುಧವನ್ನು ಶವದ ಬಳಿ ಎಸೆದು ಪರಾರಿಯಾಗಿದ್ದಾರೆ.

ಗುಂಡಿಕ್ಕಿ ಕೊಂದ ಸ್ಥಳ ಸ್ಥಳೀಯ ಪೊಲೀಸ್ ಠಾಣೆಯಿಂದ ಸುಮಾರು 200 ಮೀಟರ್ ದೂರದಲ್ಲಿದೆ. ದಾಳಿಕೋರರು ಯುವತಿಗೆ ಪರಿಚಿತರಾಗಿರುವ ಸಾಧ್ಯತೆಯಿದೆ ಎಂದು ಜಲೌನ್ ಪೊಲೀಸ್ ವರಿಷ್ಠಾಧಿಕಾರಿ ಇರಾಜ್ ರಾಜಾ ಹೇಳಿದ್ದಾರೆ. ಕೊಟ್ರಾ ಟ್ರೈಸೆಕ್ಷನ್ ಬಳಿ ಯುವತಿಯ ಹತ್ತಿರ ಬಂದಾಗ ಇಬ್ಬರು ವ್ಯಕ್ತಿಗಳು ಮುಖ ಮುಚ್ಚಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular