ಟೀಮ್ ಇಂಡಿಯಾ ಮಾಜಿ ಆಟಗಾರ ಕೀರ್ತಿ ಆಜಾದ್ ಪತ್ನಿ ಪೂನಂ ಝಾ ಆಜಾದ್ ವಿಧಿವಶರಾಗಿದ್ದಾರೆ.
ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೂ ತೃಣಮೂಲ ಕಾಂಗ್ರೆಸ್ ಮುಖಂಡ ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಆಜಾದ್ ಸೋಮವಾರ ನಿಧನರಾದರು. ಪೂನಂ ಆಜಾದ್ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
“ನಮ್ಮ ಸಂಸದ ಮತ್ತು ವಿಶ್ವಕಪ್ ವಿಜೇತ ಕ್ರಿಕೆಟಿಗ ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಝಾ ಆಜಾದ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ದುಃಖವಾಯಿತು. ನಾನು ಪೂನಂ ಅವರನ್ನು ಬಹಳ ಸಮಯದಿಂದ ಬಲ್ಲೆ” ಎಂದು ಬ್ಯಾನರ್ಜಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Last rites to be held at 4 PM at Damodar Valley cremation ground. She loved this place at Durgapur https://t.co/SEeeU5T4FP
— Kirti Azad (@KirtiAzaad) September 2, 2024

