ಮದುವೆ-ಮುಂಜಿ ಇರಲಿ, ಪುಟ್ಟ ಹಬ್ಬವೇ ಇರಲಿ, ನಮ್ಮವರಿಗೆ ಚಿನ್ನ ಅಂದ್ರೆ ಬರೀ ಒಡವೆಯಲ್ಲ, ಅದೊಂದು ಸಂಭ್ರಮದ ಎಮೋಷನ್ ಮೈಮೇಲೆ ಚಿನ್ನದ ಆಭರಣ ಹೊಳೆದರೆ ಆ ಕಳೆಯೇ ಬೇರೆ. ಆದ್ರೆ, ಇವತ್ತು ಬೆಲೆ ಏರಿಕೆ ವೇಗ ನೋಡಿದ್ರೆ, ಬಂಗಾರ ಕೊಳ್ಳುವುದು ಬರಿ ಕನಸಾಗುತ್ತಾ ಅನ್ನೋ ಆತಂಕ ಸಾಮಾನ್ಯ ಜನರನ್ನು ಕಾಡ್ತಿರೋದು ಸುಳ್ಳಲ್ಲ
ನೀವೇನಾದ್ರೂ ದಿನನಿತ್ಯ ಹಾಕಿಕೊಳ್ಳೋಕೆ ಅಥವಾ ಯಾರಿಗಾದರೂ ಗಿಫ್ಟ್ ಕೊಡೋಕೆ ಒಂದು ಚಿನ್ನದ ಸರ (Gold Chain) ಮಾಡಿಸಬೇಕು ಅಂತ ಪ್ಲಾನ್ ಮಾಡ್ತಿದ್ರೆ, ನಿಮಗೊಂದು ಸ್ಮಾರ್ಟ್ ಐಡಿಯಾ ಇಲ್ಲಿದೆ. ಅದೇ 18 ಕ್ಯಾರೆಟ್ (18 Carat) ಚಿನ್ನ.ನೀವು ದಿನನಿತ್ಯ ಹಾಕಿಕೊಳ್ಳಲು ಅಥವಾ ಗಿಫ್ಟ್ ಕೊಡಲು ಒಂದು ಚಿನ್ನದ ಸರ ಮಾಡಿಸೋಕೆ ಯೋಚಿಸುತ್ತಿದ್ದರೆ, 18 ಕ್ಯಾರೆಟ್ ಒಳ್ಳೆಯ ಆಯ್ಕೆ ಆಗಬಹುದು.ಬಜೆಟ್ ಸ್ವಲ್ಪ ಕಡಿಮೆ ಇದ್ದು, ಗಟ್ಟಿಯಾದ ಮತ್ತು ಡೈಲಿ ಯೂಸ್‌ಗೆ ಸೂಕ್ತವಾದ ಆಭರಣ ಬೇಕಿದ್ದರೆ 18 ಕ್ಯಾರೆಟ್ ಉತ್ತಮ ಆಯ್ಕೆ.
18 ಕ್ಯಾರೆಟ್ ಅಂದ್ರೇನು?
18 ಕ್ಯಾರೆಟ್ ಚಿನ್ನದಲ್ಲಿ 75% ಶುದ್ಧ ಚಿನ್ನ ಇರುತ್ತದೆ. ಉಳಿದ 25% ತಾಮ್ರ, ಬೆಳ್ಳಿ ಮೊದಲಾದ ಲೋಹಗಳನ್ನು ಮಿಶ್ರಣ ಮಾಡಿರುತ್ತಾರೆ. ಅದರಿಂದ ಇದು 22 ಕ್ಯಾರೆಟ್‌ಗಿಂತ ಸ್ವಲ್ಪ ಕಡಿಮೆ ದರದಲ್ಲಿರುತ್ತದೆ. ಆದರೆ ಇದು ಹೆಚ್ಚು ಗಟ್ಟಿಯಾಗಿರುವುದರಿಂದ ಚೈನ್, ಉಂಗುರ, ಡಿಸೈನರ್ ಆಭರಣಗಳಿಗೆ ಹೆಚ್ಚು ಬಳಸಲಾಗುತ್ತದೆ.
ಏನಿದು 18 ಕ್ಯಾರೆಟ್ ಮ್ಯಾಜಿಕ್?
ಬಹಳಷ್ಟು ಜನರಿಗೆ 18 ಕ್ಯಾರೆಟ್ ಅಂದ್ರೆ ಕ್ವಾಲಿಟಿ ಕಮ್ಮಿ ಅಂತ ಡೌಟ್ ಇರುತ್ತೆ. ಆದ್ರೆ ಅಸಲಿ ವಿಷಯ ಬೇರೆ ಇದೆ:
ಶುದ್ಧತೆ: ಇದರಲ್ಲಿ 75% ಶುದ್ಧ ಚಿನ್ನ ಇರುತ್ತೆ, ಬಾಕಿ 25% ತಾಮ್ರ ಅಥವಾ ಬೆಳ್ಳಿಯನ್ನು ಮಿಕ್ಸ್ ಮಾಡಿರ್ತಾರೆ.
ಗಟ್ಟಿತನ: 22 ಕ್ಯಾರೆಟ್‌ಗಿಂತ ಇದು ತುಂಬಾನೇ ಸ್ಟ್ರಾಂಗ್. ಹಾಗಾಗಿ ಡೈಲಿ ಯೂಸ್ ಮಾಡೋ ಚೈನ್, ಉಂಗುರ ಅಥವಾ ಡೈಮಂಡ್ ಜ್ಯುವೆಲ್ಲರಿಗಳಿಗೆ ಇದೇ ಬೆಸ್ಟ್.
ಬಜೆಟ್ ಫ್ರೆಂಡ್ಲಿ: 22 ಕ್ಯಾರೆಟ್‌ಗೆ ಹೋಲಿಸಿದರೆ ಬೆಲೆ ಗಣನೀಯವಾಗಿ ಕಡಿಮೆ ಇರುತ್ತೆ.
5 ಗ್ರಾಂ ಚೈನ್ ಮಾಡಿಸಿದ್ರೆ ಎಷ್ಟು ಖರ್ಚು?
ಒಂದು ಉದಾಹರಣೆ ನೋಡೋಣ.
18 ಕ್ಯಾರೆಟ್ ಚಿನ್ನದ ದರ – ₹11,759 (1 ಗ್ರಾಂ)
5 ಗ್ರಾಂಗೆ:
5 × 11,759 = ₹58,795
ಇದು ಕೇವಲ ಚಿನ್ನದ ಮೂಲ ದರ ಮಾತ್ರ.
ಜಿಎಸ್‌ಟಿ ಎಷ್ಟು?
ಭಾರತ ಸರ್ಕಾರದ ನಿಯಮ ಪ್ರಕಾರ ಚಿನ್ನದ ಆಭರಣಗಳ ಮೇಲೆ 3% ಜಿಎಸ್‌ಟಿ ವಿಧಿಸಲಾಗುತ್ತದೆ.
₹58,795 ಮೇಲೆ 3% ಜಿಎಸ್‌ಟಿ:
ಸುಮಾರು ₹1,764
ಹೀಗಾಗಿ ಚಿನ್ನ + ಜಿಎಸ್‌ಟಿ ಸೇರಿಸಿ ಸುಮಾರು ₹60,559 ಆಗುತ್ತದೆ (ಮೇಕಿಂಗ್ ಚಾರ್ಜ್ ಹೊರತುಪಡಿಸಿ).
ಮೇಕಿಂಗ್ ಚಾರ್ಜ್ (ಕೂಲಿ)
ಆಭರಣ ತಯಾರಿಸಲು ಜುವೆಲ್ಲರ್‌ಗಳು ಸಾಮಾನ್ಯವಾಗಿ 8%ರಿಂದ 15%ವರೆಗೆ ಮೇಕಿಂಗ್ ಚಾರ್ಜ್ ಹಾಕುತ್ತಾರೆ. ಕೆಲವೊಮ್ಮೆ ಡಿಸ್ಕೌಂಟ್ ಕೊಡಬಹುದು. ಖರೀದಿ ಮಾಡುವಾಗ ಸ್ವಲ್ಪ ಚೌಕಾಸಿ ಮಾಡಿದರೆ ಅಂತಿಮ ಬಿಲ್‌ನಲ್ಲಿ ಹಣ ಉಳಿಸಬಹುದು.
ಹಾಲ್‌ಮಾರ್ಕ್ ಕಡ್ಡಾಯವಾಗಿ ನೋಡಿ
18 ಕ್ಯಾರೆಟ್ ಚಿನ್ನ ತಗೋವಾಗ ಅದರ ಮೇಲೆ 750 ಎಂಬ BIS ಹಾಲ್‌ಮಾರ್ಕ್ ಇರಬೇಕು.
22 ಕ್ಯಾರೆಟ್‌ಗೆ 916 ಇದ್ದಂತೆ, 18 ಕ್ಯಾರೆಟ್‌ಗೆ 750 ಶುದ್ಧತೆಯ ಗುರುತು.
ಹಾಲ್‌ಮಾರ್ಕ್ ಇಲ್ಲದೆ ಚಿನ್ನ ಖರೀದಿ ಮಾಡಬೇಡಿ.ಬಿಲ್ ಪಡೆಯೋದು ಮರೆಯಬೇಡಿ.ಯಾವ ಅಂಗಡಿಯಲ್ಲೇ ಚಿನ್ನ ತಗೊಂಡರೂ ಸರಿಯಾದ ಬಿಲ್ ಪಡೆಯಬೇಕು. ಬಿಲ್‌ನಲ್ಲಿ:
ತೂಕ
ಕ್ಯಾರೆಟ್
ಚಿನ್ನದ ದರ
ಮೇಕಿಂಗ್ ಚಾರ್ಜ್
ಜಿಎಸ್‌ಟಿ
ಹಾಲ್‌ಮಾರ್ಕ್ ವಿವರ
ಚಿನ್ನ ಖರೀದಿಸುವಾಗ ದರ ಮಾತ್ರವಲ್ಲ, ಶುದ್ಧತೆ, ಜಿಎಸ್‌ಟಿ, ಮೇಕಿಂಗ್ ಚಾರ್ಜ್ ಮತ್ತು ಹಾಲ್‌ಮಾರ್ಕ್ ಎಲ್ಲವನ್ನೂ ಗಮನಿಸಬೇಕು. ಸ್ವಲ್ಪ ಜಾಗ್ರತೆ ತೆಗೆದುಕೊಂಡರೆ ಉತ್ತಮ ಗುಣಮಟ್ಟದ ಆಭರಣವನ್ನು ಸರಿಯಾದ ದರಕ್ಕೆ ಖರೀದಿಸಬಹುದು.

