HomeLatest Newsತನಗಿಂತ ಹಿರಿಯ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದ 15ರ ಬಾಲಕ: ಮನೆಯವರು ಬೈದು ಬುದ್ಧಿ ಹೇಳಿದ್ದಕ್ಕೆ ಮನೆ...

ತನಗಿಂತ ಹಿರಿಯ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದ 15ರ ಬಾಲಕ: ಮನೆಯವರು ಬೈದು ಬುದ್ಧಿ ಹೇಳಿದ್ದಕ್ಕೆ ಮನೆ ಬಿಟ್ಟುಬಂದ; ದುಡುಕಿದ ಅಪ್ರಾಪ್ತ ಆತ್ಮಹತ್ಯೆಗೆ ಶರಣು

ರಾಮನಗರ: ಚನ್ನಾಗಿ ಓದಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಯುವಕ-ಯುವತಿಯರು ಹದಿಹರೆಯದಲ್ಲಿ ಪ್ರಿತಿ-ಪ್ರೇಮ ಎಂದು ಸುತ್ತಾಡಿ ಜೀವನವನ್ನೇ ಎಂತಹ ದುರಂತ ಅಂತ್ಯದತ್ತ ಕೊಂದೊಯ್ಯುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಒಲ್ಲೋರ್ವ 15 ವರ್ಷದ ಅಪ್ರಾಪ್ತ ಬಾಲಕ 26 ವರ್ಷದ ಯುವತಿಯ ಹಿಂದೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.

ಯುವತಿ ಅಪ್ರಾಪ್ತನಿಗೆ ಬುದ್ಧಿ ಹೇಳುವುದನ್ನು ಬಿಟ್ಟು ಆತನೊಂದಿಗೆ ವಾಟ್ಸಪ್, ಚಾಟಿಂಗ್ ಎಂದು ಮಾತುಕತೆ ಮುಂದುವರೆಸಿದ ಪರಿಣಾಮ ಬಾಲಕ ಮತ್ತಷ್ಟು ದಾರಿತಪ್ಪಿದ್ದಾನೆ. ವಿದ್ಯಾಭ್ಯಾಸ ಬಿಟ್ಟು ಯುವತಿಯ ಹಿಂದೆ ಬಿದ್ದು, ದುರಂತ ಅಂತ್ಯ ಕಂಡಿದ್ದಾನೆ.

ರಾಮನಗರದ ಚನ್ನಪಟ್ಟಣ ನಗರದ ರಾಜಾಕೆಂಪೇಗೌಡ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬಿಡದಿ ಮೂಲದ ಬಾಲಕ ಮೃತ ದುರ್ದೈವಿ. 26 ವರ್ಷದ ಶೋಭಾ ಎಂಬ ಯುವತಿಯೊಂದಿಗೆ ಬಾಲಕ ಪ್ರೀತಿ-ಪ್ರೇಮ ಎಂದು ದಾರಿತಪ್ಪಿದ್ದಾನೆ. ವಿಷಯ ತಿಳಿದ ಬಾಲಕನ ಮನೆಯವರು ನಿನಗಿನ್ನೂ ಚಿಕ್ಕ ವಯಸ್ಸು. ಅಲ್ಲದೇ ಯುವತಿಗೂ ನಿನಗೂ ವಯಸ್ಸಿನ ಅಂತರವಿದೆ. ಇಂತಹ ಹುಚ್ಚಾತವನ್ನು ಬಿಟ್ಟು ಸರಿ ದಾರಿಯಲ್ಲಿ ನಡೆ. ಇದನ್ನೆಲ್ಲ ಇಲ್ಲಿಗೆ ನಿಲ್ಲುವಂತೆ ಬೈದು ಬುದ್ಧಿ ಹೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟಾದರೂ ಬಾಲಕ ಯುವತಿಯೊಂದಿಗೆ ವಾಟ್ಸಪ್ ನಲ್ಲಿ ಚಾಟಿಂಗ್, ಕಾಲಿಂಗ್, ಇನ್ ಸ್ಟಾಗ್ರಾಂ ನಲ್ಲಿ ಸಂಪರ್ಕದಲ್ಲಿದ್ದ. ಇದೇ ವಿಚಾರವಗಿ ಮನೆಯಲ್ಲಿ ಮತ್ತೆ ಬುದ್ಧಿ ಹೇಳಿದ್ದಾರೆ. ಇದರಿಂದ ನೊಂದ ಬಾಲಕ ವಿಚಾರಮಾಡದೇ ಮನೆ ಬಿಟ್ಟು ಬಂದಿದ್ದಾನೆ. ಹೀಗೆ ಮನೆಬಿಟ್ಟು ಬಂದವನು ಚನ್ನಪಟ್ಟಣದ ತನ್ನ ಸ್ನೇಹಿತನ ಮನೆಯಲ್ಲಿದ್ದ.

ತಾನು ಮನೆ ಬಿತ್ಟು ಬಂದಿದ್ದಾಗಿ ಬಾಲಕ ಯುವತಿಗೆ ತಿಳಿಸಿದ್ದಾನೆ. ಈ ವಿಚಾರ ತಿಳಿದು ಯುವತಿಗೂ ಶಾಕ್ ಆಗಿದೆ. ಇಬ್ಬರ ನಡುವೆ ಇದೇ ವಿಚಾರವಾಗಿ ಗಲಾಟೆಯಾಗಿದ್ದು, ಜಗಳವಾಡಿದ್ದಾರೆ. ಇದರಿಂದ ಮನನೊಂದ ಬಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಸ್ನೇಹಿತರು ಚನ್ನಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.

ಮಗನ ಸಾವಿಗೆ ಯುವತಿಯೇ ಕಾರಣ ಎಂದು ಬಾಲಕನ ಪೋಷಕರು ದೂರು ನೀಡಿದ್ದು, ಈ ಸಂಬಂಧ ಶೋಭಾ ಎಂಬ ಯುವತಿ ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular