HomeKarnatakaKarnataka Bandh : 144 ಅಲ್ಲಾ 544 ಸೆಕ್ಷನ್ ಜಾರಿ ಮಾಡಿದ್ರೂ ನಾಳೆ ಮೆರವಣಿಗೆ...

Karnataka Bandh : 144 ಅಲ್ಲಾ 544 ಸೆಕ್ಷನ್ ಜಾರಿ ಮಾಡಿದ್ರೂ ನಾಳೆ ಮೆರವಣಿಗೆ ಮಾಡೇ ಮಾಡ್ತೀವಿ : ವಾಟಾಳ್ ನಾಗರಾಜ್

ಬೆಂಗಳೂರು : 144 ಅಲ್ಲಾ 544 ಸೆಕ್ಷನ್ ಜಾರಿ ಮಾಡಲಿ, ನಾಳೆ  ನಾವು ಮೆರವಣಿಗೆ ಮಾಡೇ ಮಾಡ್ತೀವಿ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ನಾಳೆ ನಡೆಯುವ ಬಂದ್ ಶಾಂತಿಯುತವಾಗಿ ನಡೆಯಲಿದೆ . ಈ ಬಂದ್ ಗೆ ರಾಜ್ಯದ ಎಲ್ಲರಿಗೂ ಕೈ ಮುಗಿದು ಮನವಿ ಮಾಡ್ತೀವಿ. ‘ಇದು ಸ್ವಂತ ಬಂದ್ ಅಲ್ಲ, ಕಾವೇರಿಗಾಗಿ ನಡೆಯುತ್ತಿರುವ ಬಂದ್ ಎಂದರು. 144 ಅಲ್ಲಾ, 544 ಸೆಕ್ಷನ್ ಜಾರಿ ಮಾಡಲಿ, ಟೌನ್ ಹಾಲ್ ನಿಂದ ಮೆರವಣಿಗೆ ಮಾಡೇ ಮಾಡುತ್ತೇವೆ ಎಂದಿದ್ದಾರೆ.

ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನಲೆ ಬೆಂಗಳೂರಿನಲ್ಲಿ ಇಂದು ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ. ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರಲ್ಲಿ 144 ಸೆಕ್ಷನ್ ( ನಿಷೇಧಾಜ್ಞೆ) ಜಾರಿಯಾಗಲಿದೆ , ಒಂದು ವೇಳೆ ಬಲವಂತವಾಗಿ ಬಂದ್ ಮಾಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular